ಅಹಮದಾಬಾದ್: ಅಹಮದಾಬಾದ್ನ ಸಬರಮತಿ ಕೇಂದ್ರ ಕಾರಾಗೃಹಕ್ಕೂ ಮಹಾಮಾರಿ ಕೊರೋನಾ ವೈರಸ್ ವಕ್ಕರಿಸಿದ್ದು, ಜೈಲಿನ 11 ಕೈದಿಗಳಿಗೆ ಮತ್ತು ಮೂವರು ಜೈಲು ಸಿಬ್ಬಂದಿ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು ಸೇರಿದಂತೆ ಸೋಂಕಿತ 11 ಕೈದಿಗಳಲ್ಲಿ ಯಾರೂ ಇತರೆ ಕೈದಿಗಳ ಸಂಪರ್ಕಕ್ಕೆ ಬಂದಿಲ್ಲ. ಏಕೆಂದರೆ ಅವರು ಈಗಾಗಲೇ ಕ್ವಾರಂಟೈನಲ್ಲಿದ್ದಾರೆ ಎಂದು ಸಬರಮತಿ ಜೈಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ವಿ ರಾಣಾ ತಿಳಿಸಿದ್ದಾರೆ.
ಹೊಸದಾಗಿ ಇಬ್ಬರು ಹವಾಲ್ದಾರ್ ಗಳು ಮತ್ತು ಜೈಲು ಸಹಾಯಕ(ಪೇದೆ) ಸೇರಿದಂತೆ ಮೂವರಿಗೆ ಕೊರೋನಾ ವೈರಸ್ ತಗುಲಿದೆ. ಕಳೆದ ವಾರ ಇಬ್ಬರು ಕೈದಿಗೆಳಿಗೆ ಪಾಸಿಟಿವ್ ಬಂದಿತ್ತು ಎಂದು ರಾಣಾ ಹೇಳಿದ್ದಾರೆ.
ಇತ್ತೀಚಿಗೆ ಪೆರೋಲ್ ಮುಗಿಸಿ ಜೈಲಿಗೆ ಮರಳಿದ ಐವರು ಅಪರಾಧಿಗಳಿಗೆ ಕೊರೋನಾ ಪಾಸಿಟಿವ್ ದೃಢುಪಟ್ಟಿದೆ. ಇದುವರೆ ಒಟ್ಟ 11 ಕೈದಿಗಳಿದೆ ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.
Follow us on Social media