ಮಂಗಳೂರು : ಕೊರೊನಾ ವೈರಸ್ ಕಾಯಿಲೆ (ಕೋವಿಡ್-19) ಆತಂಕದ ಹಿನ್ನಲೆಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ನಿಂದ ಪತ್ರಿಕಾ ಭವನದಲ್ಲಿ ಮಾ.23 ರಿಂದ ರದ್ದುಪಡಿಸಿದ್ದ ಪತ್ರೀಕಾಗೋಷ್ಠಿಗಳನ್ನು ಮೇ 11 ರಿಂದ ಮರು ಆರಂಭಿಸಲಾಗುತ್ತದೆ.
ಪಕ್ಕದ ಜಿಲ್ಲೆಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ
ಹಲವು ಮಂದಿ ಸೇರುವ ಪ್ರೆಸ್ ಕ್ಲಬ್‍ನಲ್ಲಿ ಪತ್ರಕರ್ತರ ಆರೋಗ್ಯದ ದೃಷ್ಠಿಯಿಂದ ಪ್ರೆಸ್ ಕ್ಲಬ್ ಬಂದ್ ನಂತಹ ಅನಿವಾರ್ಯ ಕ್ರಮ ಕೈಗೊಂಡು, ನಂತರ ಅದನ್ನು ಮುಂದುವರಿಸಲಾಗಿತ್ತು.
ಇದೀಗ ಸಾರ್ವಜನಿಕ ಹಿತದೃಷ್ಟಿಯಿಂದ ಪತ್ರೀಕಾಗೋಷ್ಠಿಗಳನ್ನು ಆರಂಭಿಸಲಾಗುತ್ತದೆ.
Follow us on Social media