ಬೆಂಗಳೂರು : ಪಾನಮತ್ತನಾಗಿದ್ದ ವೇಳೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆ ನಡೆಸಿದವನ ಮೇಲೆ ಪೋಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕೊಲೆ ಆರೋಪಿಯಾದ ಪ್ರಭು ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೋಲೀಸರು ಬಂಧಿಸಿದ್ದಾರೆ.
ಬುಧವಾರ ಬೆಳಗಿನ ಜಾವ ನಡೆದ ಘಟನೆಯಲ್ಲಿ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಭು ಬಂಧಿಸಲ್ಪಟ್ಟಿದ್ದಾನೆ.
ಪ್ರಭು ಕರಣ್ ಸಿಂಗ್ ಎಂಬಾತನನ್ನು ಮೇ 4 ರಂದು ಪಬ್ ಜಿ ಆಡುವ ವೇಳೆ ಅಡ್ಡಿಪಡಿಸಿದ್ದಕ್ಕಾಗಿ ಹತ್ಯೆ ಮಾಡಿದ್ದನು.ಘಟನೆಯ ದೃಶ್ಯಾವಳಿಗಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಯ ಜಾಡು ಹಿಡಿದು ಬಂಧಿಸಲು ಪೋಲೀಸರು ಕಾರ್ಯಪ್ರವೃತ್ತರಾಗಿದ್ದರು.
ಆರೋಪಿ ಪ್ರಭು ಸಾಸಿವೆಘಟ್ಟದಲ್ಲಿ ಆಚಾರ್ಯ ಕಾಲೇಜ್ ಬಳಿ ಇರುವ ಕುರಿತು ಮಾಹಿತಿ ಪಡೆದ ಪೋಲೀಸರು ಆತನ ಬಂಧನಕ್ಕೆ ತೆರಳಿದ್ದಾರೆ. ಆಗ ಆರೋಪಿ ಹೆಡ್ಕಾನ್ಸ್ಟೆಬಲ್ ಹನುಮಂತೇಗೌಡ ಎಂಬುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಅದಾಗ ಪೋಲೀಸ್ ಅಧಿಕಾರಿ ಬಾಗಲಗುಂಟೆಯ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸದ್ಯ ಆರೋಪಿ ಪ್ರಭುವನ್ನು ಬಂಧಿಸಿದ್ದು ಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೀಡಾದ ಹನುಮೇಗೌಡ ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media