ನವದೆಹಲಿ: ಕೊರೋನಾ ಮಹಾಮಾರಿಯಿಂದ ವಿದೇಶಗಳಲ್ಲಿ ಸಿಲುಕಿರುವ ಸುಮಾರು 14,800 ಭಾರತೀಯರು ಸ್ವದೇಶಕ್ಕೆ ಮರಳಲು ಮುಂದಾಗಿದ್ದ ಈ ಹಿನ್ನೆಲೆಯಲ್ಲಿ ಅತಿದೊಡ್ಡ ಏರ್ ಲಿಫ್ಟ್‌ಗೆ ಭಾರತ ಸರ್ಕಾರ ಮುಂದಾಗಿದೆ.
ಮೇ 7ರಿಂದ ಕಾರ್ಯಾಚರಣೆ ಆರಂಭವಾಗಲಿದ್ದು ಮೇ 14ರವರೆಗೆ ನಡೆಯಲಿದೆ. ಈ ವೇಳೆ ಅನಿವಾಸಿ ಭಾರತೀಯರನ್ನು ಕರೆತರಲು 64 ವಿಮಾನಗಳನ್ನು ಬಳಸಲಾಗುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಾಸ್ ಕರೆತರಲು ಭಾರತ ಸರ್ಕಾರ ನಿರ್ಧರಿಸಿದೆ.
ಯುಎಇ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ್, ಫಿಲಿಪ್ಪಿನ್ಸ್, ಸೌದಿ ಅರೇಬಿಯಾ, ಕತಾರ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತಿತ್ತರ ದೇಶಗಳಿಂದ ಅನಿವಾಸಿ ಭಾರತೀಯರನ್ನು ಕರೆತರಬೇಕಿದೆ. ಇನ್ನು ಯುಎಇ ಮತ್ತು ಮಾಲ್ಡೀವ್ಸ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಇಂದು ನೌಕಾಸೇನೆಯ 3 ಹಡಗುಗಳನ್ನು ಕಳುಹಿಸಲಾಗಿದೆ.
ಮುಂಬೈ ಬಂದರಿನಿಂದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗಾರ್, ಐಎನ್ಎಸ್ ಶಾರ್ದೂಲ್ ಹಡಗುಗಳನ್ನು ಗಲ್ಫ್ ರಾಷ್ಟರಗಳಿಗೆ ಕಳುಹಿಸಲಾಗಿದ್ದು ಭಾರತಕ್ಕೆ ಮರಳುವ ಅನಿವಾಸಿಗಳನ್ನು ಕರೆತರಲಾಗುವುದು. ಐಎನ್ಎಸ್ ಜಲಾಶ್ವ ಭಾರತೀಯ ನೌಕೆ ಸೇನೆಯ ಎರಡನೇ ಅತೀ ದೊಡ್ಡ ಹಡಗಾಗಿದ್ದು ಒಂದೇ ಬಾರಿಗೆ 500 ಜನರನ್ನು ಕರೆತರುವ ಸಾಮರ್ಥ್ಯ ಹೊಂದಿದೆ.
ಮೇ 7ರಂದು ಕೇರಳದ ಕೊಚ್ಚಿಗೆ ಅಬುದಾಬಿಯಿಂದ ಮೊದಲ ವಿಮಾನ ಮೂಲಕ 209 ಮಂದಿಯನ್ನು ಕರೆತರಲಾಗುತ್ತದೆ. ಮೇ 17ರವರೆಗೆ ಲಾಕ್ ಡೌನ್ ವಿಸ್ತರಿಸಿರುವುದರಿಂದ ಭಾರತಕ್ಕೆ ಮರಳಲು ಅನಿವಾಸಿ ಭಾರತೀಯರಿಗೆ ಕಷ್ಟವಾಗಿತ್ತು.
Follow us on Social media