ಬೆಂಗಳೂರು : ಕೊರೊನಾ ಭೀತಿಯಿಂದಾಗಿ ಮುಚ್ಚಿರುವ ರಾಜ್ಯದ ದೇಗುಲಗಳ ಬಾಗಿಲು ಶೀಘ್ರದಲ್ಲೇ ತೆರೆಯಲಿದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡೇ ದೇವರ ದರ್ಶನ ಪಡೆಯಬೇಕು ಎಂದು ಮುಜರಾಯಿ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೊರೊನಾ ಕಾಟ ಆರಂಭವಾದ ಬಳಿಕ ಸೋಂಕು ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ದೇವಸ್ಥಾನಗಳ ಬಾಗಿಲು ಬಂದ್ ಮಾಡಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಶೀಘ್ರದಲ್ಲೇ ಭಕ್ತರ ಕೋರಿಕೆಗೆ ಅನುಗುಣವಾಗಿ ದೇಗುಲಗಳನ್ನು ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಇದ್ದಾಗ್ಯೂ ರಾಜ್ಯದಲ್ಲಿ ಕೆಲವು ವಲಯಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಮುಕ್ತ ಓಡಾಟ ಮತ್ತು ಮದ್ಯ ಮಾರಾಟ ಸಹಿತ ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ.ಅದರಂತೆ ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಸ್ಥಾನಗಳನ್ನು ತೆರೆಯಲಾಗುವುದು. ಆದರೆ, ದೇವಾಲಯದ ಒಳಗೆ ಜನಸಂದಣಿಗೆ ಅವಕಾಶ ನೀಡಲಾಗುವುದಿಲ. ಭಕ್ತರು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಬೇಕು. ಮೊದಲು ಇಲಾಖೆಗೆ ಸೇರಿದ ಪ್ರಮುಖ ದೇವಸ್ಥಾನಗಳನ್ನು ತೆರೆಯಲಾಗುವುದು ನಂತರ ಇತರೆ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Follow us on Social media