ಕಾರ್ಕಳ : ಬೈಂದೂರಿನ ಅಪ್ರಾಪ್ತೆಯನ್ನು ಪುಸಲಾಯಿಸಿ ಮದುವೆಯಾಗಿರುವುದೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಆಕೆಯ ಗರ್ಭಿಣಿಯಾಗಲು ಕಾರಣನಾಗಿದ್ದ ಬೆಳ್ಮಣ್‌ನ ಆರೋಪಿಯೊಬ್ಬನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬೆಳ್ಮಣ್ ಪರಿಸರದ ಬಾಡಿಗೆ ಮನೆಯಲ್ಲಿ ನೆಲೆಸಿಕೊಂಡದ್ದ ವಿಜಯ(೨೦) ಪ್ರಕರಣದ ಆರೋಪಿಯಾಗಿದ್ದಾನೆ. ಅಪ್ರಾಪ್ತ ಬಾಲಕಿಯು ಒಂದು ವರ್ಷದ ಹಿಂದೆ ಬೆಳ್ಮಣ್‌ನಲ್ಲಿರುವ ತನ್ನ ಚಿಕ್ಕಮ್ಮಳ ಮನೆಗೆ ಬಂದಿದ್ದಳು. ಅದೇ ಸಂದರ್ಭದಲ್ಲಿ ಆರೋಪಿ ವಿಜಯನ ಪರಿಚಯ ಆಕೆಗೆ ಉಂಟಾಗಿತ್ತು. ಅದೇ ಸಂದರ್ಭದಲ್ಲಿ ಆಕೆಯನ್ನು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಪುಸಲಾಯಿಸಿ ದೈಹಿಕ ಸುಖ ಅನುಭವಿಸಿದ್ದ. ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಾಳೆ.ಕಳೆದ ಎರಡು ತಿಂಗಳುಗಳಿಂದ ಆರೋಪಿ ವಿಜಯ ಅಪ್ರಾಪ್ತ ಬಾಲಕಿಯೊಂದಿಗೆ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಆಕೆಗೆ ತಾಳಿ ಇರುವ ನೂಲನ್ನು ಕಟ್ಟಿ ಮದುವೆಯಾಗಿರುವುದಾಗಿ ನಂಬಿಸಿರುತ್ತಾನೆ. ಈ ಕುರಿತು ಬಾಲಕಿಯ ಹೆತ್ತವರು ನೀಡಿರುವ ದೂರಿನನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Follow us on Social media