ಮಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ತಗತ್ಯ. ರೋಗ ಲಕ್ಷಣವಿದ್ದಲ್ಲಿ ಇತರರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿರುವ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಾನು ದಿನ ನಿತ್ಯ ಹೊರಗಿರುವುದರಿಂದಾಗಿ ಸ್ವತಃ ಅವರೇ ಕ್ವಾರಂಟೈನ್‌ಗೆ ಒಳಗಾಗಿದ್ದು 22 ದಿನಗಳಿಂದ ತನ್ನ 2 ವರ್ಷದ ಮಗುವಿನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ.
ದಿನವಿಡೀ ಅಗತ್ಯ ಸ್ಥಳಗಳಿಗೆ ಆಸ್ಪತ್ರೆಗಳಿಗೆ ಭೇಟಿ ನೀಡುವ ಇವರು ತಮ್ಮ ಮಗುವಿನ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತನ್ನ ಮಗುವಿನೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬರುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ಕಂಡು ಬಂದ ದಿನದಿಂದ ತನ್ನ ಎರಡು ವರ್ಷದ ಮಗುವಿನ ಪಾಲನೆಯಿಂದ ದೂರ ಉಳಿದಿದ್ದು ಜಿಲ್ಲಾಧಿಕಾರಿಯ ತಂದೆ ತಾಯಿ ಮಗುವಿನ ಪಾಲನೆ ಮಾಡುತ್ತಿದ್ದಾರೆ.ಮಂಗಳೂರಿನಲ್ಲಿ ಇರುವ ಜಿಲ್ಲಾಧಿಕಾರಿ ಬಂಗಲೆಯಲ್ಲಿರುವ ಸಿಂಧೂ ಅವರು ಹೊರಗಿನಿಂದ ಮನೆಗ ಬಂದ ಮೇಲೆ ಮಗುವಿನ ಆರೋಗ್ಯದ ದೃಷ್ಟಿಯಿದ ಸ್ಪರ್ಶಿಸದೆ ದೂರದಿಂದಲ್ಲೇ ಮಾತನಾಡಿಸುತ್ತಾರೆ. ಇದೀಗ ಮಗುವನ್ನು ಶನಿವಾರ ಬೆಂಗಳೂರಿನಲ್ಲಿರುವ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.ಇನ್ನು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ಕೂಡಾ ತನ್ನ ಐದು ವರ್ಷದೊಳಗಿನ ಇಬ್ಬರು ಮಕ್ಕಳೊಂದಿಗೆ ಅಂತರವನ್ನು ಕಾಯ್ದುಕೊಂಡಿದ್ದು ಮಕ್ಕಳನ್ನು ಮೈಸೂರಿನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.ತನ್ನ ಮಗುವಿನೊಂದಿಗೆ ಅಂತರ ಕಾಯ್ದುಕೊಳ್ಳುವ ಕುರಿತಾಗಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾಧಿಕಾರಿಯಾಗಿರುವ ಕಾರಣದಿಂದಾಗಿ ಪ್ರತಿ ದಿನ ಹಲವು ಕಡೆಗಳಿಗೆ ಭೇಟಿ ನೀಡಬೇಕು,. ಸಭೆಗಳನ್ನು ನಡೆಸಬೇಕು. ಎಷ್ಟು ಮುಂಜಾಗ್ರತಾ ಕ್ರಮಕೈಗೊಂಡರೂ ಸೋಂಕಿನ ಭೀತಿ ಇದ್ದೇ ಇರುತ್ತದೆ. ಆ ಕಾರಣದಿಂದಾಗಿ ಮನೆಯಲ್ಲಿ ಸ್ವತಃ ಅಂತರವನ್ನು ಪ್ರತ್ಯೇಕವಾಗಿ ಇರುತ್ತೇನೆ. ಹೀಗಿಯೇ ಆರೋಗ್ಯ ಇಲಾಖೆ ಅಧಿಕಾರಿ, ಸಿಬಂದಿ, ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ವಿವಿಧ ಇಲಾಖೆಗಳ ಬೇರೆ ಬೇರೆ ಅಧಿಕಾರಿಗಳು ಕೂಡಾ ಮುಂಜಾಗ್ರತಾ ಕ್ರಮವಾಗಿ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಕಚೇರಿ ಆಸ್ಪತ್ರೆಗೆ ಬರುವವರು ಕೂಡಾ ಈ ರೀತಿ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆ. ನಾನು ಕೂಡಾ ಅದೇ ರೀತಿ ಮಗುವಿನಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ.
Follow us on Social media