ಬೆಂಗಳೂರು: ಮೇ 3ರವರೆಗೂ ಲಾಕ್ ಡೌನ್ ಮುಂದುವರಿಕೆ ಸಂಬಂಧ ಇಂದು ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಏನನ್ನೂ ಹೇಳಲಿಲ್ಲ, ಈ ಸಂಬಂಧ ಅಧಿಸೂಚನೆ ಹೊರಡಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಬೆಳೆ ಮಾರಾಟವಾಗದೆ ನಷ್ಟವಾಗುತ್ತಿದೆ. ತಾವೇ ಖುದ್ದಾಗಿ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ರೈತರು ಏನು ಮಾಡಬೇಕು, ಮಾರುಕಟ್ಟೆಯಲ್ಲಿ ಹೇಗೆ ನಿಗಡಿ ಪಡಿಸುತ್ತಾರೆ ಎಂಬುದರ ಬಗ್ಗೆ ಮೋದಿ ತುಟ್ಟಿ ಬಿಚ್ಚಿಲ್ಲ ಎಂದರು.
ಅಸಂಘಟಿಕ ವಲಯದ ಕಾರ್ಮಿಕರು ದಿನನಿತ್ಯದ ಜೀವನ ಸಾಗಿಸುವುದೇ ದುಸ್ಥರವಾಗಿದೆ. ಇವರಿಗೆ ಪ್ಯಾಕೇಜ್ ನೀಡುವ ನಿರೀಕ್ಷೆ ಸುಳ್ಳಾಗಿದೆ. ಕಂಪನಿಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸಂಬಳ ದೊರೆಯಬೇಕು, ಆದರೆ, ಉದ್ಯೋಗದಾತರು ಹೇಗೆ ಸರಿಹೊಂದಿಸಿಕೊಂಡು ಮುಂದೆ ಸಾಗಬೇಕು ಎಂಬುದರ ಬಗ್ಗೆ ಪ್ರಧಾನಿ ಏನನ್ನೂ ಹೇಳಿಲ್ಲ ಎಂದು ಡಿಕೆ ಶಿವಕುಮಾರ್, ಆರ್ಥಿಕತೆ ಸದೃಢತೆಗೊಳ್ಳಲು ಹಲವು ಮಾರ್ಗಗಳಿವೆ. ಸರ್ಕಾರ ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ಹಳ್ಳಿಗಳಲ್ಲಿ ಅಲ್ಪಸಂಖ್ಯಾತರ ಬಗ್ಗೆ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಎದುರಾಗಿದ್ದು, ಅವರ ರಕ್ಷಣೆ ಕುರಿತು ಪ್ರಧಾನಿ ಮೋದಿ ಯಾವುದೇ ಸಂದೇಶ ನೀಡಿಲ್ಲ ಎಂದು ಟೀಕಿಸಿದ ಡಿಕೆ ಶಿವಕುಮಾರ್, ಸಂವಿಧಾನದ ರಕ್ಷಣೆ ಮಾಡಬೇಕು, ಆರ್ಥಿಕವಾಗಿ ಜನರನ್ನು ರಕ್ಷಣೆ ಮಾಡಬೇಕು, ಆರೋಗ್ಯ , ಪೊಲೀಸ್ ಸಿಬ್ಬಂದಿ, ಹಗಲು ರಾತ್ರಿ ಸೇವೆ ಮಾಡುತ್ತಿದ್ದಾರೆ ಅವರಿಗೆ ಸಹಾಯ ಮಾಡಬೇಕು , ಅವರ ಕುಟುಂಬಕ್ಕೆ ರಕ್ಷಣೆ ನೀಡುವಂತಹ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದರು.
Follow us on Social media