ಪಡುಬಿದ್ರಿ: ನಿತ್ಯ ಮೊಬೈಲ್ ನೋಡ ಬೇಡ ಮನೆಯಲ್ಲಿ ಸ್ವಲ್ಪ ಕೆಲಸ ಮಾಡು ಎಂದಿದ್ದಕ್ಕೆ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇಲ್ಲಿನ ಅದಮಾರು ಲಯನ್ಸ್ ಶಾಲೆಯಲ್ಲಿ 7 ನೇ ತರಗತಿಯ ವಿದ್ಯಾರ್ಥಿನಿ ಸೃಜನ್ಯ (13) ಸೋಮವಾರ ಸಂಜೆ ನಾಲ್ಕು ಗಂಟೆಗೆ ಮೊಬೈಲ್ ನೋಡುತ್ತ ಕುಳಿತಿದ್ದಳು. ಅದಕ್ಕೆ ಆಕೆಯ ತಾಯಿ ದಿನ ಮೊಬೈಲ್ ನೋಡುತ್ತಾ ಕೂರಬೇಡ, ಸ್ವಲ್ಪ ಮನೆಯ ಕೆಲಸವನ್ನು ಮಾಡು ಎಂದು ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದ ಮಗಳು ಮನೆಯ ಬೆಡ್ರೂಮಿನ ಒಳಗೆ ಹೋಗಿ ಕಬ್ಬಿಣದ ಪೈಪಿಗೆ ಚೂಡಿದಾರದ ವೇಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಂಚಿನಡ್ಕ ಶಾಲೆಯಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯ ತಂದೆ, ತಾಯಿ ಇಬ್ಬರು ಅಧ್ಯಾಪಕರಾಗಿದ್ದರೆ.
Source : udupitimes
Follow us on Social media