ಬೆಂಗಳೂರು : ಭಾರತರತ್ನ, ಸಂವಿಧಾನದ ನಿರ್ಮಾತೃ ಡಾ|| ಭೀಮರಾವ್ ಅಂಬೇಡ್ಕರ್ ಅವರ ೧೨೯ನೇ ಜಯಂತಿಯನ್ನು ಮನೆಗಳಲ್ಲೇ ಆಚರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲಹೆ ಮಾಡಿದ್ದಾರೆ.
ರಾಜ್ಯದ ನಾಯಕರು, ಶಾಸಕರು, ಸಂಸದರು ಹಾಗೂ ಎಲ್ಲಾ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಬೇಕು. ಅನುಕೂಲವಾಗುವ ಸ್ಥಳದಲ್ಲಿ ಒಂದು ಗಂಟ ಕಾಲ ಅಂಬೇಡ್ಕರ್ ಅವರ ಜೀವನ ಚರಿತ್ರೆ ಅವರ ಬದುಕು ಸಾಧನೆಗಳ ಕುರಿತು ಪುಸ್ತಕವನ್ನು ಅಧ್ಯಯನ ಮಾಡಬೇಕು ಎಂದಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ತಮ್ಮ ಮನೆಯಿರುವ ಕ್ಷೇತ್ರಗಳಲ್ಲಿ, ಬೀದಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಸರ್ಕಾರದ ಕಾನೂನು, ನಿಯಮಗಳನ್ನು ಭಂಗ ಮಾಡದೆ ಕೊರೋನಾ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಂಕಲ್ಪ ತೊಡಬೇಕು ಎಂದಿದ್ದಾರೆ.