Breaking News

ಫೇಸ್‌ಬುಕ್ ಪೋಸ್ಟ್‌ನಲ್ಲಿ ಇಸ್ಲಾಂ ಬಗ್ಗೆ ಅವಹೇಳನ: ಯುಎಇಯಲ್ಲಿ ಹಾವೇರಿ ಮೂಲದ ಯುವಕನಿಗೆ ಜೈಲುಶಿಕ್ಷೆ

ದುಬೈ: ಕೊರೋನಾವೈರಸ್  ಕುರಿತು ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಸಾಮಾಜಿಕ ತಾಣಗಳಲ್ಲಿ  ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದ ಕರ್ನಾಟಕದ ಮೂಲದ ಯುವಕನ ವಿರುದ್ಧ ಪೋಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದು  ಮಾಧ್ಯಮವೊಂದು ವರದಿ ಮಾಡಿದೆ.

ಎಮ್ರಿಲ್ ಸರ್ವೀಸ್ ಎಂಬ ಖಾಸಗಿ ಸಂಸ್ಥೆಯಲ್ಲಿ ಟೀಂ ಲೀಡರ್ ಆಗಿದ್ದ ರಾಕೇಶ್  ಬಿ. ಕಿತ್ತೂರಮಠ್ ಸಾಮಾಜಿಕ ತಾಣದಲ್ಲಿ ಇಸ್ಲಾಂ ವಿರುದ್ಧ ಅವಹೇಳನಾಕಾರಿ  ಲಾಮೆಂಟ್ ಮಾಡಿದ್ದ ಕಾರಣ ಆಕ್ರೋಶಕ್ಕೆ ತುತ್ತಾಗಿದ್ದರು. ಈ ಕಾರಣಕ್ಕಾಗಿ ಅವರನ್ನು ಸಂಸ್ಥೆಯಿಂದ ವಜಾ ಮಾಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

“ರಾಕೇಶ್ ತಕ್ಷಣದಿಂದಲೇ ಸಂಸ್ಥೆಯಿಂದ ವಜಾ ಆಗಿದ್ದಾರೆ. ವರನ್ನು ದುಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಇಂತಹ ದ್ವೇಷದ ಸಂದೇಶ ಪ್ರಸಾರ ಮಾಡುವ ಬಗ್ಗೆ ನಮ್ಮಲ್ಲಿ  ಯಾವ ಬಗೆಯ ಕ್ಷಮೆಯಿಲ್ಲ. ” ಎಂದು ಎಮ್ರಿಲ್ ಸರ್ವಿಸಸ್‌ನ ಸಿಇಒ ಸ್ಟುವರ್ಟ್ ಹ್ಯಾರಿಸನ್ ಹೇಳಿದ್ದಾರೆ.

“ಒಂದು ಸಂಘಟನೆಯಾಗಿ, ನಾವು ವಿವಿಧತೆಯನ್ನು ಸ್ವಾಗತಿಸುತ್ತೇವೆ. ನಮ್ಮಲ್ಲಿ ಪ್ರತಿ ರಾಷ್ಟ್ರೀಯತೆ, ಧರ್ಮ ಮತ್ತು ಹಿನ್ನೆಲಯಿಂದ ಬಂದವರಿಗೆ ಸಮಾನ ಗೌರವವಿದೆ. ನಮ್ಮ ನೌಕರರು ಕೆಲಸದ ಒಳಗೆ ಮತ್ತು ಹೊರಗೆ ಮೌಲ್ಯಗಳಿಗೆ ಗೌರವ ನೀಡುತ್ತಾರೆ ಎನ್ನುವುದನ್ನು ಖಚಿತಪಡಿಸಲು ನಾವು ಕಟ್ಟುನಿಟ್ಟಾದ ಸಾಮಾಜಿಕ ಮಾಧ್ಯಮ ನೀತಿಯನ್ನು ಹೊಂದಿದ್ದೇವೆ “ಎಂದು ಹ್ಯಾರಿಸನ್ ಹೇಳಿದ್ದಾರೆ.

ರಾಕೇಶ್ ಇನ್ನೂ ಯುಎಇಯಲ್ಲಿದ್ದಾರೆಯೇ ಎಂದು ಪತ್ತೆ ಮಾಡಲು ಸಂಸ್ಥೆ ಇದೀಗ ಪ್ರಯತ್ನದಲ್ಲಿದೆ. “ನಮ್ಮಲ್ಲಿ 8,500 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ, ಆದ್ದರಿಂದ ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನಾವು ಅವರನ್ನು ಕೆಲಸದಿಂದ ತೆಗೆದುಹಾಕಿದ್ದೇವೆ. ಅವರು ಇನ್ನೂ ದೇಶದಲ್ಲಿದ್ದರೆ, ಅವರನ್ನು ದುಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು” ಎಂದು ಅವರು ಹೇಳಿದರು.

ಮೂಲತಃ ಕರ್ನಾಟಕದ ರಾಣೆಬೆನ್ನೂರಿಯಿಂದ ಬಂದ ರಾಕೇಶ್  ಇತ್ತೀಚಿನ ದಿನಗಳಲ್ಲಿ ಇಸ್ಲಾಮೋಫೋಬಿಕ್ ಸಂದೇಶಗಳ ಮೂಲಕ ತೊಂದರೆಗೆ ಸಿಲುಕಿರುವ ಭಾರತೀಯ ವಲಸಿಗರ ಪಟ್ಟಿಗೆ ಸೇರುತ್ತಾರೆ.ಈ ವಾರದ ಆರಂಭದಲ್ಲಿ, ಅಬುಧಾಬಿ ನಿವಾಸಿ ಮಿತೇಶ್ ಉದೇಶಿಯನ್ನು ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವ  ಕಾರ್ಟೂನ್ ಅನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿತ್ತು. ಯುಎಇ 2015 ರಲ್ಲಿ ಅಂಗೀಕರಿಸಿದ ಶಾಸನದಡಿಯಲ್ಲಿ ಎಲ್ಲಾ ಧಾರ್ಮಿಕ ಅಥವಾ ಜನಾಂಗೀಯ ತಾರತಮ್ಯವನ್ನು ನಿಷೇಧಿಸಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×