ಬೆಂಗಳೂರು : ಸಾರ್ವಜನಿಕರು ಮನೆಯಿಂದ ಹೊರಬಂದಾಗಲೆಲ್ಲಾ ಮುಖಗವಸು (ಮಾಸ್ಕ್) ಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದ್ದು, ಎಲ್ಲರೂ ಮಾಸ್ಕ್ಗಳನ್ನು ಧರಿಸಬೇಕಾಗಿಲ್ಲ ಎಂದು ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ.
ಖರೀದಿ ಸಮಯದಲ್ಲಿ, ಕಚೇರಿ ಕೆಲಸಕ್ಕೆ ಹಾಜರಾದಾಗ ಮತ್ತು ಆಕಸ್ಮಿಕವಾಗಿ ಕೊವಿದ್ -19 ಸೋಂಕಿತ ವ್ಯಕ್ತಿಯ ಪ್ರಥಮ ಇಲ್ಲವೇ ದ್ವಿಸಂಪರ್ಕಗಳೊಂದಿಗೆ ಸಂವಹನ ನಡೆಸಿದಾಗಲೆಲ್ಲಾ ಸಾರ್ವಜನಿಕರು ಮುಖಗವಸು ಧರಿಸಬೇಕೆಂದು ಸುತ್ತೋಲೆ ಹೇಳಿದೆ. ಮುಖಗವಸು ಒಂಬತ್ತು ಇಂಚು ಅಗಲ,ಏಳು ಇಂಚು ಉದ್ದವಿರಬೇಕು. ಮಕ್ಕಳಿಗೆ ಐದು ಇಂಚು ಗಾತ್ರವನ್ನು ಶಿಫಾರಸು ಮಾಡಲಾಗಿದೆ.
ಕೈಯಿಂದ ಇಲ್ಲವೇ ಯಂತ್ರದಿಂದ ಹೊಲಿದಿರುವ ಮುಖಗವಸುಗಳನ್ನು ಮರು ಬಳಸಬಹುದಾಗಿದೆ.