ಮಂಗಳೂರು : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ದ.ಕ. ಜಿಲ್ಲೆ ಭಾನುವಾರವೂ ಸಂಪೂರ್ಣ ಬಂದ್ ಆಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಹಾಗೆಯೇ ತುರ್ತು ಸೇವೆಗಳಾದ ಹಾಲು ವಿತರಣೆ, ಮೆಡಿಕಲ್, ಪತ್ರಿಕೆ, ಪೆಟ್ರೋಲ್ ಬಂಕ್, ಅಡುಗೆ ಅನಿಲ ವಿತರಣೆ ಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಜಿಲ್ಲೆಯ ಸುಮಾರು 400 ವರ್ತಕರ ಸಭೆ ಮಾಡಿ ಮನೆ ಮನೆಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡುವ ಕುರಿತಾಗಿ ಚರ್ಚೆ ನಡೆಸಲಾಗುವುದು. ಹಾಗೆಯೇ ಆನ್‌ಲೈನ್ ಮೂಲಕವೂ ಆರ್ಡರ್ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಸಂಪರ್ಕ ಮಾಡಲು ಸಾಧ್ಯವಾಗದವರು 1077 ಸಂಖ್ಯೆಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.ವಲಸೆ ಕಾರ್ಮಿಕರಿಗೆ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಆಹಾರ ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಎರಡೂವರೆ ಸಾವಿರ ಯಕ್ಷಗಾನ ಕಲಾವಿದರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.ಮಂಗಳೂರು – ಕೇರಳ ಹೆದ್ದಾರಿ ಇನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಹೇಳಿದೆ. ಆದರೆ ಸದ್ಯಕ್ಕೆ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ. ಕೇರಳದಿಂದ ಅಂಬುಲೆನ್ಸ್‌ಗೂ ದ.ಕ ಜಿಲ್ಲೆ ಪ್ರವೇಶವಿಲ್ಲ.ಹಾಗೇ ಪ್ರವೇಶ ನೀಡಿದ್ದಲ್ಲಿ ಯಾರಿಗಾದರೂ ಕೊರೊನಾ ಇದ್ದರೆ ಅಪಾಯವಾಗುತ್ತದೆ. ದ.ಕ ಜಿಲ್ಲೆ ಮತ್ತು ಕೇರಳದ ನಡುವೆ 21 ಗಡಿಭಾಗಗಳಿವೆ. ಎಲ್ಲಾ ಗಡಿಭಾಗಗಳೂ ಬಂದ್ ಆಗಿದೆ ಎಂದು ದ.ಕ ವಿಶೇಷ ನೊಡೆಲ್ ಅಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.
Follow us on Social media