ಉಡುಪಿ: ತನಗೆ ಕೊರೋನಾವೈರಸ್ ರೋಗವಿದೆ ಎಂದು ಭಯಪಟ್ಟ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಉಪ್ಪೂರುವಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಾತ ಉಪ್ಪೂರಿನ ನರ್ನಾಡು ನಿವಾಸಿ 56 ವರ್ಷದ ಗೋಪಾಲಕೃಷ್ಣ ಮಡಿವಾಳ ಎಂದು ಗುರುತಿಸಲಾಗಿದ್ದು ಈತ ಕೆ ಎಸ್ ಆರ್ ಟಿಸಿಯಲ್ಲಿ ತರಬೇತುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ.
“ತನಗೆ ಕೊರೋನಾ ಇದೆ” ಎಂದು ಡೆತ್ ನೋಟ್ ಬರೆದಿಟ್ಟಿದ್ದ ಗೋಪಾಲಕೃಷ್ಣ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅವರಲ್ಲಿ ಯಾವ ಕೊರೋನಾ ಲಕ್ಷಣಗಳಿರಲಿಲ್ಲ ಎಂದು ಅವರ ಕುಟುಂಬ ಮೂಲಗಳು ಹೇಳಿದೆ.
ಘಟನೆ ಬಗೆಗೆ ಬ್ರಹ್ಮಾವರ ಪೋಲೀಸರಿಗೆ ಮೃತರ ಕುಟುಂಬ ಮಾಹಿತಿ ನೀಡಿದ್ದು ತನಿಖೆ ನಡೆದಿದೆ.
Follow us on Social media