ಉಡುಪಿ: ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು 20 ಸಾವಿರ ರೂ. ನಗದು ಹಾಗೂ ಚಾಕಲೇಟ್ ಕಳವು ಮಾಡಿದ ಘಟನೆ ತಡರಾತ್ರಿ ನಡೆದಿದೆ.
ಇಬ್ಬರು ಕಳ್ಳರ ಕೈಚಳಕ ಅಂಗಡಿಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಶ್ ಕೌಂಟರ್ ನಲ್ಲಿರಿಸಿದ್ದ 20 ಸಾವಿರ ರೂ. ನಗದು ಕಳವುಗೈದ ಕಳ್ಳರು ಅನಂತರ ಚಾಕಲೇಟ್ ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅಲ್ಲದೇ ಬ್ರೆಶ್ ಸಹಿತ ಕೆಲವೊಂದು ವಸ್ತುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Follow us on Social media