ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸುವ ಮೂಲಕ ಆರ್ಸಿಬಿ, 18ನೇ ಆವೃತ್ತಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಬೆನ್ನಲ್ಲೇ ಆರ್ಸಿಬಿ ಮುಂದಿನ ಟಾರ್ಗೆಟ್ ಗುಜರಾತ್ ಟೈಟನ್ಸ್!
ಏಪ್ರಿಲ್ 2 ರಂದು ಗುರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಮುಂದಿನ ಮ್ಯಾಚ್ ಆಡಲಿದೆ. ವಿಶೇಷ ಅಂದ್ರೆ ಈ ಮ್ಯಾಚ್ ಬೆಂಗಳೂರಲ್ಲಿ ನಡೆಯಲಿದೆ. ಎಂದಿನಂತೆ ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ. ಗುಜರಾತ್ ಟೈಟನ್ಸ್ ಈಗಾಗಲೇ ಐಪಿಎಲ್ನಲ್ಲಿ ಒಂದು ಪಂದ್ಯಗಳನ್ನ ಆಡಿದೆ. ಮಾರ್ಚ್ 25 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸೋಲನ್ನು ಕಂಡಿದೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಆರ್ಸಿಬಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನ ಆಡಿದೆ. ಮೊದಲ ಪಂದ್ಯ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಿತ್ತು. ಈ ಪಂದ್ಯವನ್ನು ಆರ್ಸಿಬಿ ಗೆದ್ದುಕೊಂಡಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಭರ್ಜರಿ ಅಂದರೆ 50 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಆರ್ಸಿಬಿ 7 ವಿಕೆಟ್ ಕಳೆದುಕೊಂಡು 196 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಸಿಎಸ್ಕೆ 8 ವಿಕೆಟ್ ಕಳೆದುಕೊಂಡು 146 ರನ್ಗಳಿಸಿ ಸೋಲಿಗೆ ಶರಣಾಯ್ತು. ಆ ಮೂಲಕ ಎರಡು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದೆ.
Follow us on Social media