Breaking News

ವಿದೇಶದಿಂದ ಆಗಮಿಸಿದವರು ತಪಾಸಣೆಗೆ ಒಳಗಾಗುವುದು ಕಡ್ಡಾಯ: ಶ್ರೀರಾಮುಲು

ಕಲಬುರಗಿ : ಮಹಾಮಾರಿ ಕೊರೋನಾದಿಂದ ಜಿಲ್ಲೆಯ ವೃದ್ಧರೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ನಗರದ ಜೇಮ್ಸ್ ಆಸ್ಪತ್ರೆಗೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ‌ ಶ್ರೀರಾಮುಲು ಭಾನುವಾರ‌ ಭೇಟಿ ನೀಡಿದರು.
ನಂತರ ಕೊರೊನಾ ತಡೆಗಟ್ಟಲು ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿದರು.
ಬಳಿಕ ಐಸೋಲೇಟೆಡ್ ವಾರ್ಡ್ ಗೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಆಗಮಿಸಿದವರು ತಪಾಸಣೆಗೆ ಒಳಗಾಗಬೇಕಿದ್ದು, ಸುಮಾರು 14 ದಿನಗಳ ಕಾಲ ಹೋಮ್ ಐಸೋಲೇಷನ್ ನಲ್ಲಿ ಇರುವುದು ಕಡ್ಡಾಯ. ಅಲ್ಲದೇ, ವಿದೇಶದಿಂದ ಆಗಮಿಸಿದವರು ಚಾಚುತಪ್ಪದೇ ಈ ಕಾನೂನು ಪಾಲನೆ ಮಾಡಬೇಕು ಎಂದರು.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×