Breaking News

ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಆರ್​​ಸಿಬಿ

ಕೋಲ್ಕತ್ತಾದ ಈಡನ್ ಗಾರ್ಡನ್​ ಸ್ಟೇಡಿಯಮ್​ನಲ್ಲಿ ನಿನ್ನೆ ನಡೆದ 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕೆಕೆಆರ್ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ.

ಕೆಕೆಆರ್​​​ ನೀಡಿದ 175 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ ಪರ ಫಿಲ್​ ಸಾಲ್ಟ್​​ ಅಬ್ಬರಿಸಿದರು. ಕೆಕೆಆರ್​ ಬೌಲರ್​ಗಳನ್ನು ಕಾಡಿದ ಇವರು ಕೇವಲ 31 ಬಾಲ್​ನಲ್ಲಿ 56 ರನ್​ ಚಚ್ಚಿದ್ರು. ಈ ಪೈಕಿ ಬರೋಬ್ಬರಿ 9 ಫೋರ್​, 2 ಭರ್ಜರಿ ಸಿಕ್ಸರ್​ಗಳು ಇದ್ದವು. ಫಿಲ್​ ಸಾಲ್ಟ್​​ಗೆ ಸಾಥ್​ ನೀಡಿದ ಕೊಹ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದರು.

ಆರಂಭದಿಂದಲೇ ಅಗ್ರೆಸ್ಸಿವ್​ನಿಂದ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು. ಕೊನೆಯವರೆಗೂ ಕ್ರೀಸ್​ನಲ್ಲೇ ನಿಂತು ಬ್ಯಾಟ್​ ಮಾಡಿದ ಇವರು ಕೇವಲ 36 ಬಾಲ್​ನಲ್ಲಿ 59 ರನ್​ ಚಚ್ಚಿದ್ರು. 3 ಭರ್ಜರಿ ಸಿಕ್ಸರ್​​​, 4 ಫೋರ್​ಗಳು ಸೇರಿದ್ದವು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 163ಕ್ಕೂ ಹೆಚ್ಚಿತ್ತು.

ಇನ್ನೊಂದೆಡೆ ಕ್ಯಾಪ್ಟನ್​ ರಜತ್​ ಪಾಟಿದಾರ್​ ಕೇವಲ 16 ಬಾಲ್​ನಲ್ಲಿ 1 ಸಿಕ್ಸರ್​, 5 ಫೋರ್​ ಸಮೇತ 34 ರನ್​​ ಬಾರಿಸಿದರು. ದೇವದತ್​ ಪಡಿಕ್ಕಲ್​​ ಕೇವಲ 10 ರನ್​ ಮತ್ತು ಲಿಯಾಮ್​ ಲಿವಿಂಗ್​ ಸ್ಟೋನ್​ 5 ಎಸೆತಗಳಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 15 ರನ್​ ಚಚ್ಚಿದ್ರು. ಆರ್​​ಸಿಬಿ 16.2 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 177 ರನ್​ ಸಿಡಿಸಿ ಗೆದ್ದು ಬೀಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×