ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಬಾಹ್ಯಾಕಾಶದಿಂದ ಭೂಮಿಗೆ ಮರಳಿದ್ದಾರೆ. ನಿನ್ನೆ ಅಂತಾರಾಷ್ಟ್ರಿಯ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಹೊರಟಿದ್ದ ಎಲ್ಲಾ ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲೋರಿಡಾ ಕಡಲಿಗೆ ಬಂದಿಳಿದಿದ್ದಾರೆ.
ನೌಕೆಯು ಬಂದಿಳಿಯುತ್ತಿದ್ದಂತೆಯೇ ನಾಲ್ವರು ಗಗನಯಾತ್ರಿಗಳನ್ನು ರಕ್ಷಣಾ ತಂಡವು ಅದ್ದೂರಿ ಸ್ವಾಗತ ನೀಡಿತು. ನಂತರ ಆರೈಕೆಗಾಗಿ ದೋಣಿಯ ಮೂಲಕ ಸುರಕ್ಷಿತವಾಗಿ ಕೊಂಡೊಯ್ಯಲಾಯಿತು. ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದರು. ಈ ವೇಳೆ 60 ಗಂಟೆಗಳ ಬಾಹ್ಯಾಕಾಶ ನಡಿಗೆಯನ್ನೂ ಮಾಡಿದರು.
ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಫ್ಲೋರಿಡಾ ಕಡಲಿಗೆ ಬಂದಿಳಿಯುತ್ತಿದ್ದಂತೆಯೇ ಸ್ವಾಗತ ನೀಡಿ, ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು.
ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಲಿದೆ. ಅಂತೆಯೇ ಸುನಿತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿಗೆ ಹೋಸ್ಟನ್ನ ಜಾನ್ಸನ್ ಸ್ಪೇಸ್ ಸೆಂಟರ್ನಲ್ಲಿ ರಿಹ್ಯಾಬಿಲಿಟೇಷನ್ (Rehabilitation) ನಡೆಯಲಿದೆ. ಫ್ಲೊರಿಡಾ ಸಮುದ್ರದಿಂದ ಹೋಸ್ಟನ್ ಜಾನ್ಸನ್ ಸ್ಪೇಸ್ ಸೆಂಟರ್ಗೆ ಗಗನಯಾತ್ರಿಗಳನ್ನ ಕರೆದುಕೊಂಡು ಹೋಗಲಾಗಿದೆ. ಇಲ್ಲಿ ಮುಂದಿನ 45 ದಿನಗಳ ಕಾಲ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ.
Follow us on Social media