ಮಂಗಳೂರು: ಮಂಗಳೂರು, ಉಳ್ಳಾಲ ಹಾಗೂ ಮುಲ್ಕಿ ತಾಲೂಕು ವ್ಯಾಪ್ತಿಯ ಜೇನು ಸಾಕಾಣೆ ಬಗ್ಗೆ ಆಸಕ್ತಿಯಿರುವವರಿಗೆ ಆ.8ರ ಬೆಳಿಗ್ಗೆ 10 ಗಂಟೆಗೆ ನಗರದ ಬೆಂದೂರ್ ಕ್ರಾಸ್ನಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ.
ಜೇನುಕೃಷಿ ತಜ್ಞ ಪೂತ್ತೂರಿನ ರಾಧಾಕೃಷ್ಣ ಅವರು ತರಬೇತಿ ನೀಡಲಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಜೇನುಸಾಕಾಣೆಗೆ ದೊರೆಯುವ ಸವಲತ್ತುಗಳಿಗೆ ಫಲಾನುಭವಿಗಳು ನೋಂದಾಯಿಸಿಕೊಳ್ಳಬಹುದು. ಆಸಕ್ತರು ತಮ್ಮ ಜಮೀನಿನ ಆರ್.ಟಿ.ಸಿ. ವಿವರ ಅಥವಾ ತಮ್ಮ ವಾಸ್ತವ್ಯ ಸ್ಥಳದ ದೃಢೀಕರಣ, ಆಧಾರ್ ವಿವರ ಹಾಗೂ ತಮ್ಮ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತರಬೇತಿಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಆ.5ರೊಳಗೆ ದೂರವಾಣಿ ಸಂಖ್ಯೆ: 0824-2423615 ಕರೆ ಮಾಡುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow us on Social media