ಉಡುಪಿ : ಹಿಜಾಬ್ ಬಳಿಕ ಕಾಲೇಜಿನ ಶೌಚಾಲಯಲ್ಲಿ ನಡೆದ ಮೊಬೈಲ್ ವೀಡಿಯೋ ಚಿತ್ರೀಕರಣದಿಂದ ಉಡುಪಿ ಚರ್ಚೆಯಾಗುತ್ತಿದೆ. ಯಾವುದೇ ಹಾಸ್ಟೆಲ್ ಕಾಲೇಜು ವಸತಿ ಶಾಲೆಯಲ್ಲಿ ಯಾರೇ ಹೀಗೆ ಮಾಡಿದ್ರೂ ನನ್ನ ಗಮನಕ್ಕೆ ತನ್ನಿ. ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ. ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಘಟನೆ ನಡೆದ ಕಾಲೇಜಿನ ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್‌ಗಳೆಲ್ಲವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಯಾರನ್ನೂ ಇಲ್ಲಿ ರಕ್ಷಿಸುವ ಪ್ರಶ್ನೆ ಇಲ್ಲ. ಆದಷ್ಟು ಬೇಗ ಈ ಘಟನೆಯ ತನಿಖೆ ಆಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದರು.
ನಾನು ನಿಮ್ಮ ಅಕ್ಕನಾಗಿ ವಿನಂತಿ ಮಾಡುತ್ತೇನೆ. ಯಾವುದೇ ಹಾಸ್ಟೆಲ್, ಕಾಲೇಜು, ವಸತಿ ಶಾಲೆಯಲ್ಲಿ ಯಾರೇ ಹೀಗೆ ಮಾಡಿದ್ರೂ ನನ್ನ ಗಮನಕ್ಕೆ ತನ್ನಿ. ಮಾಹಿತಿ ನೀಡಿದವರನ್ನು ಗೌಪ್ಯವಾಗಿ ಇಟ್ಟು ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಲವ್ ಜಿಹಾದ್ ಮತಾಂತರ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕೇಂದ್ರ ಗೃಹ ಸಚಿವರ ಗಮನಕ್ಕೂ ತಂದು ನಾನು ನ್ಯಾಯ ಕೊಡಿಸುತ್ತೇವೆ ಎಂದರು.
Follow us on Social media