ಹಣ್ಣು, ತರಕಾರಿ ಹೀಗೆ ನಾನಾ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ ಇದೀಗ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ, ಹೌದು ಟೋಮೇಟೋ ಬೆಲೆ ಮಾರುಕಟ್ಟೆಯಲ್ಲಿ ಕೈಸುಡುತ್ತಿರುವ ಈ ಸಂದರ್ಭದಲ್ಲಿ ಉರ್ಫಿ ಟೊಮ್ಯಾಟೋ ಹಣ್ಣಿಗೆ ಕಣ್ಣು ಹಾಕಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಟೊಮ್ಯಾಟೋದಿಂದ ಮಾಡಿದ ಕಿವಿಯೋಲೆಯನ್ನು ಅವರು ಧರಿಸಿ ಫೋಸ್ ಕೊಟ್ಟ ಫೋಟೋ ವೈರಲ್ ಆಗಿದೆ . ಆದರೆ ಈ ಮೂಲಕ ಉರ್ಫಿ ಅದೇನೂ ಹೇಳಕ್ಕೆ ಹೊರಟಿದ್ದಾರೆ ಅನ್ನುವುದು ಮಾತ್ರ ಗೊತ್ತಿಲ್ಲ.ಉರ್ಫಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುವವರು ಯಾರೂ ಇರಲಿಲ್ಲವಂತೆ. ಹಾಗಾಗಿಯೇ ತಮ್ಮ ಕಾಸ್ಟ್ಯೂಮ್ ಅನ್ನು ತಾವೇ ಡಿಸೈನ್ ಮಾಡಲು ಕಲಿತಿದ್ದಾರಂತೆ.
ಇತ್ತ ಮನೆಯಲ್ಲೂ ಗೌರವವಿಲ್ಲ, ಬೀದಿಯಲ್ಲೂ ಇಲ್ಲ. ಈ ವಿಚಾರವಾಗಿ ತಮಗೆ ತುಂಬಾ ನೋವನ್ನು ತೋಡಿಕೊಂಡಿದ್ದಾರೆ ಉರ್ಫಿ.ಮೊನ್ನೆಯಷ್ಟೇ ಉರ್ಫಿ ಕಣ್ಣಿನ ಸರ್ಜರಿ ಮಾಡಿಕೊಂಡು ಕಣ್ಣಿನ ಕೆಳಭಾಗ ನೋವಾಗಿದೆ ಎಂದು ಹೇಳಿಕೊಂಡಿದ್ದರು. ಕಣ್ಣಿನ ಸುತ್ತಲೂ ಅಲರ್ಜಿಯಾಗಿದ್ದು, ಅದನ್ನು ಮೇಕಪ್ ನಿಂದ ಮುಚ್ಚಲೂ ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.ಅಲ್ಲದೇ, ಅವರು ಇದೀಗ ಕೆಲಸ ಹುಡುಕುತ್ತಿದ್ದಾರಂತೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ನಾನು ಫೇಮಸ್ ಆಗಿದ್ದೇನೆ, ಜನರು ನನ್ನನ್ನು ಗುರುತಿಸುತ್ತಾರೆ ಎಲ್ಲವೂ ನಿಜ. ಆದರೆ, ನನಗೆ ಕೆಲಸವಿಲ್ಲ.
ನನ್ನೊಂದಿಗೆ ಕೆಲಸ ಮಾಡಲು ಯಾರೂ ಸಿದ್ದರಿಲ್ಲ ಎಂದು ಉರ್ಫಿ ಬೇಸರ ವ್ಯಕ್ತಪಡಿಸಿದರು.ಈ ಹಿಂದೆ ಉರ್ಫಿಗಾಗಿ ಕಾಸ್ಟ್ಯೂಮ್ ಡಿಸೈನ್ ಮಾಡುವವರು ಯಾರೂ ಇರಲಿಲ್ಲವಂತೆ. ಹಾಗಾಗಿಯೇ ತಮ್ಮ ಕಾಸ್ಟ್ಯೂಮ್ ಅನ್ನು ತಾವೇ ಡಿಸೈನ್ ಮಾಡಲು ಕಲಿತಿದ್ದಾರಂತೆ. ಒಟ್ಟಾರೆ ವಿಭಿನ್ನ ರೀತಿಯಲ್ಲಿ ಕಾಸ್ಟ್ಯೂಮ್ ಧರಿಸಿಕೊಂಡು ಉರ್ಫಿ ಹೈಲೈಟ್ ಆಗುತ್ತಿರುವುದು ಮಾತ್ರ ಸುಳ್ಳಲ್ಲ.
Follow us on Social media