ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಈ ಎಲ್ಲಾ ಯೋಜನೆಗಳಿಗೆ ನೀವು ಹಣದ ಕ್ರೋಢೀಕರಣ ಹೇಗೆ ಮಾಡುತ್ತೀರಿ. ನಿಮ್ಮ ಆದಾಯದ ಮೂಲ ಎಲ್ಲಿಂದ..? ಯೋಜನೆಗಳು ಎಷ್ಟು ವರ್ಷ ಮುಂದುವರಿಯುತ್ತದೆ.
ಈ ಎಲ್ಲಾ ವಿಚಾರಗಳ ಬಗ್ಗೆ ಕೂಡಲೇ ಶ್ವೇತ ಪತ್ರವನ್ನು ಅವರು ಹೊರಡಿಸಬೇಕು ಎಂದು ನಳಿನ್ ಒತ್ತಾಯಿಸಿದ್ದಾರೆ.
ಪದವೀಧರರಿಗೆ ನಿರುದ್ಯೋಗಿಗಳಿಗೆ ಭತ್ಯೆಯನ್ನು ಘೋಷಣೆ ಮಾಡಿದಾಗ ಈ ಹಿಂದೆ ಕಾಂಗ್ರೆಸ್ಸಿಗರು ಮಾನದಂಡ ಮಾಡಿರಲಿಲ್ಲ.
ಖಾಸಗಿ ಬಸ್ಸುಗಳಲ್ಲಿ ಸಂಚರಿಸುವವರಿಗೆ ಏನು ವ್ಯವಸ್ಥೆ ಮಾಡಿದ್ದೀರಿ..?
ಇದು ಎಷ್ಟು ವರ್ಷ ಮುಂದುವರಿಯುತ್ತದೆ ಎನ್ನುವುದನ್ನು ಸರಕಾರ ಪ್ರಕಟ ಮಾಡಬೇಕು.
ಈ ಹಿಂದೆ ಸರಕಾರ ನೀಡುತ್ತಿದ್ದ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ, ಅಂಗವಿಕಲರ ಪಿಂಚಣಿ ಇತ್ಯಾದಿ ಪಿಂಚಣಿಗಳ ಗತಿ ಏನು..?
ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲದೇ ಇದ್ದರೆ ಏನು ಗತಿ… ? ಯಾರಿಗೂ ಹೊರೆಯಾಗದ ರೀತಿಯಲ್ಲಿ ಯೋಜನೆ ಹೇಗೆ ಜಾರಿ ಮಾಡ್ತೀರಿ..? ಎಂದು ಪ್ರಶ್ನಿಸಿದರು.
ನಮ್ಮದು ಶ್ರೀಲಂಕಾ, ಪಾಕಿಸ್ಥಾನದಲ್ಲಿ ಆದ ಹಾಗೆ ಆರ್ಥಿಕ ಕುಸಿತ ಆಗದಂತೆ ನೋಡಿಕೊಳ್ಳಬೇಕು.
ಮೊದಲು ಶ್ವೇತ ಪತ್ರ ಹೊರಡಿಸಲಿ. ಕೇವಲ ಮುಂಬರುವ ಚುನಾವಣೆ ದೂರದೃಷ್ಟಿಯಲ್ಲಿ ಇಟ್ಟುಕೊಂಡು ಇದನ್ನು ಮಾಡುವುದು ಬೇಡ.
ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಇದನ್ನು ಅನುಷ್ಠಾನ ಮಾಡಿರಿ ಎಂದಿದ್ದಾರೆ.
Follow us on Social media