ಮಂಗಳೂರು : ಮಹಾಮಾರಿ ಕೊರೊನಾ ಸಾಂಕ್ರಾಮಿಕದ ಬಳಿಕ ಹೃದಯಘಾತಗಳು ಹೆಚ್ಚಾಗ್ತಿವೆ. ವಯಸ್ಸಿನ ಮಿತಿ ಇಲ್ಲದೆ ಹಿರಿಯರಿಂದ ಎಳೆಯ ಪ್ರಾಯದ ಮಕ್ಕಳು ಹೃದಯಘಾತದಿಂದ ಸಾವನ್ನಪ್ಪುತಿರುವುದು ಸಹಜವಾಗಿಯೇ ಜನರಲ್ಲಿ ಆತಂಕ ತಂದಿದೆ.
ಅದರಲ್ಲೂ ಶಾಲಾ ಮಕ್ಕಳು ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಮಡಿಕೇರಿ ಬಳಿಕ ಇದೀಗ ಮಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಮಂಗಳೂರಿನ ಎಮ್ ಆರ್ ಪಿ ಎಲ್ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಅಬ್ದುಲ್ ರಹೀಂ ಎನ್ನುವರ ಪುತ್ರ ಮೊಹಮ್ಮದ್ ಹಾಶಿನ್ ಹೃದಯಘಾತದಿಂದ ಇಹಲೋಹ ತ್ಯಜಿಸಿದ್ದಾನೆ.
ದಿನೇ ದಿನೇ ಹೆಚ್ಚುತ್ತಿರುವ ಮಕ್ಕಳ ಸಾವಿನ ಹಿಂದಿನ ನಿಗೂಡತೆ ತಿಳಿಯದೆ ಪೋಷಕರು ಆತಂಕಗೊಂಡಿದ್ದು, ಇದರ ಹಿಂದಿನ ಸ್ಪಷ್ಟ ಕಾರಣವನ್ನು ಪತ್ತೆಹಚ್ಚಬೇಕಾದ ಅಗತ್ಯವಿದೆ.
Follow us on Social media