ಪುತ್ತೂರು : ಚಿಗುರು ಮೀಸೆ ಹುಟ್ಟೋ ಹೊತ್ತಿನಲ್ಲಿ ತನ್ನ ಕಾಮ ತೀರಿಸಿಕೊಳ್ಳಲು ಅಮಾಯಕ ಹೆಣ್ಣು ಮಕ್ಕಳನ್ನ ಬಳಸಿಕೊಳ್ಳುತ್ತಿ ಕಾಮುಕ ಯುವಕ ನಿತೇಶ್ ರೈ ವಿರುದ್ಧ ಇದೀಗ ಸಂಪ್ಯ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.
ಪುತ್ತೂರಿನಲ್ಲಿ ಖಾಸಗೀ ಕೆಲಸ ಮಾಡುತ್ತಿರುವ ನಿತೇಶ್ ರೈನ ಕಾಮದ ವಿಚಾರ ಎರಡು ಮೂರು ತಿಂಗಳ ಹಿಂದೆ ಬಯಲಾಗಿದ್ದು ಈತ ನೀಡಿದ ಕಿರುಕುಳದ ಬಗ್ಗೆ ಹಲವು ಹೆಣ್ಣು ಮಕ್ಕಳು ಆರೋಪವನ್ನ ಮಾಡಿದ್ದರು.
ಈತ ತನ್ನ ಕೆಲಸದ ಸಂದರ್ಭಗಳಲ್ಲಿ ಹಲವು ಊರುಗಳಿಗೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿನ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರೊಂದಿಗೆ ಸಲುಗೆ ಬೆಳೆಸಿಕೊಂಡು ಬಳಿಕ ಪ್ರೀತಿಸುತ್ತೇನೆ ಎಂದು ನಾಟಕವಾಡಿ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಸಿಕ್ಕ ಸಿಕ್ಕಲ್ಲಿ ಅಮಾಯಕ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರನ್ನ ತನ್ನ ಕಾಮತ್ರಿಶೆ ತಿರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ.
ಅಪ್ರಾಪ್ತ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು, ಅಕೆಯ ಬಳಿ ಪ್ರೀತಿಸುತ್ತಿದ್ದೇನೆ ಎಂದು ನಾಟಕವಾಡಿ ದೌರ್ಜನ್ಯ ಎಸಗಿ, ನಂತರ ನಿರಂತರವಾಗಿ ಅಕೆಯ ಫೋಟೋಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ. ಅಲ್ಲದೆ ಈತನ ಸ್ನೇಹಿತರಿಗೂ ಆಕೆಯ ನಂಬರ್ ನೀಡಿ ಅವರೊಂದಿಗೆ ಲೈಂಗಿಕ ಕ್ರೀಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದ. ಇದನ್ನು ತಿಳಿದ ಹುಡುಗಿಯ ಪೋಷಕರು ಹಾಗೂ ಸ್ಥಳೀಯರು ಸೇರಿ ಈತನನ್ನ ಹೆಡೆಮುರಿಕಟ್ಟಿ ಧರ್ಮದೇಟು ನೀಡಿದ್ದರು.
ಇದೀಗ ನಿತೇಶ್ ರೈ ವಿರುದ್ಧ ಸಂಪ್ಯ ಠಾಣೆಯಲ್ಲಿ ಇಬ್ಬರು ಯುವತಿಯರು ದೂರನ್ನ ನೀಡಿದ್ದು, ಇದೀಗ ಫೋಕ್ಸೋ, ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ಎರಡು ವಿಭಿನ್ನ ಪ್ರಕರಣಗಳು ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ 354(D), 506 ಒಂದು ಪ್ರಕರಣ ಹಾಗೂ 354(D), 363, 354(A), IPc & 8Pocso act – ಅಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಅಮಾಯಕ ಹೆಣ್ಣು ಮಕ್ಕಳನ್ನ ದಾರಿ ತಪ್ಪಿಸಿ ತನ್ನ ಹಿತಕ್ಕೆ ಬೇಕಾದಂತೆ ಬಳಸಿಕೊಂಡ ಕಾಮುಕನ ವಿರುದ್ಧ ಕೇಸ್ ದಾಖಲಿಸಿಕೊಂಡು ಆರೋಪಿಗಾಗಿ ಸಂಪ್ಯ ಪೋಲೀಸರು ಬಲೆ ಬೀಸಿದ್ದಾರೆ.
Follow us on Social media