ಭೋಪಾಲ್: ಯುವ ವೈದ್ಯೆಯೊಬ್ಬರು ತನ್ನ ಕೆಲಸದ ಒತ್ತಡದಿಂದ ಮನನೊಂದು ರಾಸಾಯನಿಕ ಔಷಧವನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.
ಆಕಾಂಶಾ ಮಹೇಶ್ವರಿ ಮೃತ ದುರ್ದೈವಿ.
ಭೋಪಾಲ್‌ನ ಸರ್ಕಾರಿ ಸ್ವಾಮ್ಯದ ಗಾಂಧಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಆಕೆಯ ಕೊಠಡಿಯಿಂದ ಖಾಲಿ ಇಂಜೆಕ್ಷನ್ ಬಾಟಲುಗಳು ಮತ್ತು ಸಿರಿಂಜ್ ಅನ್ನು ವಶಪಡಿಸಿಕೊಂಡಿದ್ದು, ವೈದ್ಯೆ ತಲಾ 2.5 ಮಿಲಿಯ ನಾಲ್ಕು ಡೋಸ್ ಅರಿವಳಿಕೆಯನ್ನು ಚುಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ವೈದ್ಯೆ ಸಾವಿಗೀಡಾದ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ‘ತನಗೆ ಮಾನಸಿಕವಾಗಿ ಬಲವಿಲ್ಲ ಮತ್ತು ಕೆಲಸದೊತ್ತಡ ತಾಳಲಾಗುತ್ತಿಲ್ಲ’ ಎಂದು ಬರೆದುಕೊಂಡಿರುವ ಅವರು ಪೋಷಕರಿಗೆ ಕ್ಷಮೆಯಾಚಿಸಿದ್ದಾರೆ.
Follow us on Social media