ಆಡಿಲೇಡ್: ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ ಇಂದು ನಡೆದ ವಿಶ್ವಕಪ್ ಟಿ-20 ಸೂಪರ್ 12 ರ ಘಟ್ಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.
ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ವೇಗಿ ಶಹೀನ್ ಶಾನ್ ಆಫ್ರಿದಿ ನಾಲ್ಕು ವಿಕೆಟ್ ಕಬಳಿಸುವುದರೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಕೊಡುಗೆ ನೀಡಿದರು.
ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ ನಂತರ ಸೋತ ನಂತರ ಪಾಕಿಸ್ತಾನ ಸೆಮಿಫೈನಲ್ ಗೆ ತಲುಪುದು ತ್ರಾಸದಾಯಕವಾಗಿತ್ತು. ಆದರೆ, ಇದೀಗ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ವಿಶ್ವಕಪ್ ಗೆಲ್ಲುವ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
ಇದಕ್ಕೂ ಮುನ್ನ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ ಕೇವಲ 127 ರನ್ ಗಳಿಸಿತು. ಶಹೀನ್ 22 ರನ್ ಗಳಿಗೆ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ರಿಜ್ವಾನ್ 32, ಮೊಹಮ್ಮದ್ ಹ್ಯಾರಿಸ್, 31, ಶಾನ್ ಮಸೂದ್ ಅಜೇಯ 24 ರನ್ ಗಳಿಸುವುದರೊಂದಿಗೆ ಪಾಕಿಸ್ತಾನ 18.1 ಓವರ್ ಗಳಲ್ಲಿ 128 ರನ್ ಗಳಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.
Follow us on Social media