ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ ಬಳಿಕ ಭಾವುಕರಾಗಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಸಿನಿಮಾದಲ್ಲಿರುವ ಚಾರ್ಲಿಯನ್ನು ಕಂಡು ತಮ್ಮ ಮನೆಯಲ್ಲಿದ್ದ ‘ಸನ್ನಿ’ ಹೆಸರಿನ ಶ್ವಾನವನ್ನು ನೆನೆದು ಬಸವರಾಜ ಬೊಮ್ಮಾಯಿ ಕಣ್ಣೀರಿಟ್ಟಿದ್ದಾರೆ.
ಇನ್ನು ‘777 ಚಾರ್ಲಿ’ ಸಿನಿಮಾದಲ್ಲಿ ನಾಯಿ ಮತ್ತು ಮಾನವನ ನಡುವಿನ ಪ್ರೀತಿಯನ್ನು ಭಾವನಾತ್ಮಕವಾಗಿ ತೋರಿಸಲಾಗಿದ್ದು, ಶ್ವಾನ ಪ್ರೇಮಿಯೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘777 ಚಾರ್ಲಿ’ ಚಿತ್ರವನ್ನು ವೀಕ್ಷಿಸಿದ್ದು, ಅವರೊಂದಿಗೆ ಉಡುಪಿ ಶಾಸಕ ರಘುಪತಿ ಭಟ್, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್ ಹಾಜರಿದ್ದು, ಈ ವೇಳೆ ನಿರ್ದೇಶಕ ಕಿರಣ್ ರಾಜ್, ನಟ ರಕ್ಷಿತ್ ಶೆಟ್ಟಿ, ನಟಿ ಸಂಗೀತಾ ಶೃಂಗೇರಿ ಕೂಡ ಇದ್ದರು.
Follow us on Social media