ತುಮಕೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಶುಕ್ರವಾರ ಶಿರಾ ಉಪಚುನಾವಣೆ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ವಿಜಯೇಂದ್ರ ಮಾಸ್ಟರ್ ಪ್ಲಾನ್ ವರ್ಕ್ ಔಟ್ ಆಗಿತ್ತು, ಹೀಗಾಗಿ ಶಿರಾದಲ್ಲೂ ಅದೇ ತಂತ್ರಗಾರಿಗೆ ಬಳಸಲು ಮುಂದಾಗಿದ್ದಾರೆ.
ಶುಕ್ರವಾರ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ನಾಮಪತ್ರ ಸಲ್ಲಿಕೆ ವೇಳೆ ನಡೆದ ಮೆರವಣಿಗೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಮತ್ತು ಗೋವಿಂದ ಕಾರಜೋಳ ಜೊತೆ ವಿಜಯೇಂದ್ರ ಭಾಗವಹಿಸಿದ್ದರು.
ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆಯೇ ಹೊರತು ಜಾತಿ ಆಧಾರದ ಮೇಲಲ್ಲ, ಸ್ವಾತಂತ್ರ್ಯ ಬಂದ 70 ವರ್ಷದ ನಂತರ ಶಿರಾದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ, ಇನ್ನೂ ಪ್ರಚಾರದ ಕೊನೆಯ ದಿನದವರೆಗೂ ಕ್ಷೇತ್ರದಲ್ಲೇ ಉಳಿಯಲು ವಿಜಯೇಂದ್ರ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow us on Social media