ಕೋಲ್ಕತಾ: ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅವರು ತಮ್ಮ ಬಹುಕಾಲದ ಗೆಳೆತಿ ಬುಲ್ ಬುಲ್ ಸಹಾ ಅವರ ಜತೆ ಶೀಘ್ರವೇ ಹಸೆ ಮಣೆ ಏರಲಿದ್ದಾರೆ.ಅಂದಹಾಗೆ ಅರುಣ್ ಲಾಲ್ ಅವರಿಗೆ ಈಗ 66 ವರ್ಷ ವಯಸ್ಸು. ಅವರ ಗೆಳತಿಗೆ 38 ವರ್ಷ ವಯಸ್ಸಾಗಿದ್ದು, ಪ್ರೀತಿಗೆ ವಯಸ್ಸು ಅಡ್ಡ ಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿರುವ ಅರುಣ್ ಲಾಲ್ ಇದೇ ಮೇ 2 ರಂದು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅರುಣ್ ಲಾಲ್ ಅವರಿಗೆ ಇದು ಎರಡನೇ ಮದುವೆ ಆಗಿದ್ದು, ಅವರ ಪತ್ನಿಯಾಗಲಿರುವವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ.
ಇಬ್ಬರೂ ಹಲವು ಸಮಯದಿಂದ ಸಂಬಂಧದಲ್ಲಿದ್ದರು. ಈ ಮದುವೆಗೆ ಲಾಲ್ ಪತ್ನಿ ರೀನಾ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದರೂ, ಅನಾರೋಗ್ಯದಲ್ಲಿರುವ ಮೊದಲ ಪತ್ನಿಯೊಂದಿಗೇ ವಾಸ ಮಾಡುತ್ತಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
Follow us on Social media