ವಾಷಿಂಗ್ಟನ್ : 1995ರಲ್ಲಿ ಆರಂಭವಾದ ಮೈಕ್ರೋಸಾಫ್ಟ್ ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಕಂಪ್ಯೂಟರ್ ಬಳಸುತ್ತಿದ್ದ ಎಲ್ಲರ ಅಚ್ಚುಮೆಚ್ಚಿನ ಬ್ರೌಸರ್ ಆಗಿತ್ತು. ಆದರೆ ಇದೀಗ ಮೈಕ್ರೋಸಾಫ್ಟ್ ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಜೂ.15ರಂದು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿ ಇತಿಹಾಸದ ಪುಟ ಸೇರಲಿದೆ.
ಮೈಕ್ರೋಸಾಫ್ಟ್ 27 ವರ್ಷಗಳ ನಂತರ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಮುಚ್ಚುತ್ತಿದ್ದು 90 ರ ಬಳಕೆದಾರರು ತಮ್ಮ ಹಳೆಯ ನೆನಪುಗಳನ್ನು ಇದರೊಂದಿಗೆ ಮೆಲುಕುಹಾಕುವಂತಾಗಿದೆ
1995ರಲ್ಲಿ ಕಂಪ್ಯೂಟರ್‌ಗೆ ಹಾಸುಹೊಕ್ಕಿದ್ದ ಎಕ್ಸ್ ಪ್ಲೋರರ್ 2003ಕ್ಕಾಗಲೇ ಭಾರೀ ಪ್ರಸಿದ್ಧತೆ ಪಡೆದುಕೊಂಡಿತ್ತು. ವಿಶ್ವದ ಶೇ.95 ಕಂಪ್ಯೂಟರ್‌ಗಳಲ್ಲಿ ಎಕ್ಸ್‌ಪ್ಲೋರರ್ ಬಳಕೆಗೆ ಬಂದಿತ್ತು.
ಆದರೆ ಅನಂತರದ ದಿನಗಳಲ್ಲಿ ಹೊಸ ಹೊಸ ಬ್ರೌಸರ್‌ಗಳ ಬಿಡುಗಡೆಯೊಂದಿಗೆ ಭಾರೀ ಪ್ರಮಾಣದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ನಂತರದ ವರ್ಷಗಳಲ್ಲಿ ಅವರ ಬಳಕೆದಾರ ನೆಲೆಯು ಕುಸಿಯಿತು.. ಮೈಕ್ರೋಸಾಫ್ಟ್ ಸಂಸ್ಥೆ ಹೊಸದಾಗಿ ಎಡ್ಜ್ ಆರಂಭಿಸಿದ ಹಿನ್ನೆಲೆ 2016ರಿಂದ ಎಕ್ಸ್‌ಪ್ಲೋರರ್‌ಗೆ ಅಪ್‌ಡೇಟ್‌ಗಳನ್ನು ನಿಲ್ಲಿಸಿತ್ತು.ಇದೀಗ ಎಕ್ಸ್ ಪ್ಲೋರರ್ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಎಮೈಕ್ರೋಸಾಫ್ಟ್ ಎಡ್ಜ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗಿಂತ ವೇಗವಾದ, ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಆಧುನಿಕ ಬ್ರೌಸಿಂಗ್ ಅನುಭವವಾಗಿದೆ, ಮೈಕ್ರೋಸಾಫ್ಟ್ ಸಂಸ್ಥೆ ಹೇಳಿಕೊಂಡಿದೆ.