ಬೆಂಗಳೂರು: ಹಳ್ಳಿಹಕ್ಕಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಚ್.ವಿಶ್ವನಾಥ್ 2021ರವರೆಗೆ ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದ್ದು, ಮೇಲ್ಮನೆ ಸದಸ್ಯರಾದ ಆರ್. ಶಂಕರ್, ಎಂ.ಟಿ.ಬಿ.ನಾಗರಾಜ್ ಗೆ ಸಚಿವ ಸ್ಥಾನ ನೀಡಲು ನಿಶಾನೆ ತೋರಿದೆ.
ಸೋಮವಾರ ಎಚ್ ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗಿಯ ಪೀಠ, ಹೆಚ್ ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ. ವಿಶ್ವನಾಥ್ ಅನರ್ಹತೆಯನ್ನು ಮುಖ್ಯಮಂತ್ರಿ ಪರಿಗಣಿಸಬೇಕು. ಹೀಗಾಗಿ 2021ರವರೆಗೆ ಸಚಿವರಾಗಲು ಅವರು ಅರ್ಹರಲ್ಲ. 2021ರವರೆಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಸಚಿವರಾಗುವಂತಿಲ್ಲ ಎಂಬುದಾಗಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಿದೆ.
ಹೆಚ್ ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ. ಆರ್.ಶಂಕರ್, ಎಂ.ಟಿ.ಬಿ ನಾಗರಾಜ್ ಅವರು ಚುನಾವಣೆಯಲ್ಲಿ ಆಯ್ಕೆಗೊಂಡು ಎಂ.ಎಲ್ ಸಿ ಆಗಿದ್ದಾರೆ. ಹೀಗಾಗಿ ಅವರಿಗೆ ಸಚಿವರಾಗಲು ಯಾವುದೇ ಅಡೆತಡೆಯಿಲ್ಲ ಎಂದು ತೀರ್ಪು ನೀಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ತೀರ್ಪಿನಿಂದ ಅಲ್ಪ ನಿರಾಳರಾಗಿದ್ದಾರೆ.
Follow us on Social media