ಮಂಗಳೂರು : ವಿಶ್ವದಾದ್ಯಂತ ದಾಖಲೆ ಬರೆದ ಗಿರಿಗಿಟ್ ಸಿನಿಮಾ , 200 ನೇ ದಿನವನ್ನು ಯಶಸ್ವಿಯಾಗಿ ಪೂರೈಸಿ ತುಳು ಚಿತ್ರರಂಗದಲ್ಲಿ ದಾಖಲೆ ಬರೆದಿದೆ.
ಈ ಸಿನಿಮಾವು ಆಗಸ್ಟ್ 23 ರಂದು ಬಿಡುಗಡೆಗೊಂಡಿದ್ದು ನಗರದ ಚಿತ್ರ ಮಂದಿರಗಳು ಮಾತ್ರವಲದೆ 15 ದೇಶಗಳಲ್ಲಿ ತೆರೆಕಂಡಿದೆ.ಕೋಸ್ಟಲ್ ವುಡ್ ನ ಸ್ಟಾರ್ ನಟ ರೂಪೇಶ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾದಲ್ಲಿ ಧಾರಾವಾಹಿ ನಟಿ, ಶಿಲ್ಪಾ ಶೆಟ್ಟಿ ನಾಯಕಿಯಾಗಿದ್ದು, ತುಳು ಖ್ಯಾತ ಹಾಸ್ಯ ನಟರಾದ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮೊದಲಾದವರು ಜನರಿಗೆ ಮನರಂಜನೆಯ ಔತಣ ನೀಡಿದ್ದಾರೆ.ರೂಪೇಶ್ ಶೆಟ್ಟಿ ಅವರ ಮೂಲಕಥೆಗೆ ರೂಪೇಶ್ ಹಾಗೂ ವಿನೀತ್ ಕುಮಾರ್ ರೈ ಚಿತ್ರಕಥೆಗೆ ಬರೆದಿದ್ದು ಡೇರಲ್ ಮಸ್ಕರೇನ್ಹಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ, ನೃತ್ಯ ನಿರ್ದೇಶನ ನವೀನ್ ಶೆಟ್ಟಿ, ಸಂಕಲನ ರಾಹುಲ್ ವಸಿಷ್ಠ, ಸಹ ನಿರ್ದೇಶನ ಸುಮನ್ ಸುವರ್ಣ ಎಲ್ಲರೂ ಸಿನಿಮಾ ಉತ್ತಮವಾಗಲೆಂದು ಮತ್ತಷ್ಟು ದುಡಿದಿದ್ದಾರೆ.ಗುರುಕಿರಣ್ ಹಾಗೂ ಪಲ್ಲವಿ ಪ್ರಭು ಹಾಡಿರುವ ‘ಊರೇ ಮುರ್‌ಕಡ್ …ಕರ್ಪ್ಯೂ ಪಾಡಡ್..’ ಹಾಡಿಗೆ ಡರೆಲ್ ಮಸ್ಕರೇನಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ ನೀಡಿದ್ದು, ಇದಕ್ಕೆ ಕೀರ್ತಿನ್ ಭಂಡಾರಿ ಅವರ ಸಾಹಿತ್ಯವಿದೆ. ಜೊತೆಗೆ ನವೀನ್ ಶೆಟ್ಟಿಯವರು ಕ್ಯಾಮೆರಾದಲ್ಲಿ ಸಹಕರಿಸಿದ್ದಾರೆ. ಇದೀಗ ಸಿನಿಮಾ ಭರ್ಜರಿ ಯಶಸ್ವಿ ಕಂಡಿದ್ದು ಈ ತಂಡದ ಮುಂದಿನ ಸಿನಿಮಾ ಸರ್ಕಸ್ ಮತ್ತಷ್ಟು ಮನರಂಜನೆ ನೀಡುವ ನಿರೀಕ್ಷೆಯಿದೆ.
Follow us on Social media