ಚೆನ್ನೈ: ಲಡಾಖ್’ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಅಟ್ಟಹಾಸಕ್ಕೆ ಬಲಿಯಾದ ತಮಿಳುನಾಡಿನ ಪಳನಿಯವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಇನ್ನೊಂದು ವರ್ಷದಲ್ಲಿ ನಿವೃತ್ತರಾಗುವವರಿದ್ದರು.
ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಪಳನಿಯವರು ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿದ್ದರು. ಪ್ರೀತಿಯಿಂದ ಕಟ್ಟಿಕೊಂಡಿದ್ದ ಮನೆಯಲ್ಲಿ ತಮ್ಮ ಪ್ರೀತಿ ಪಾತ್ರರೊಂದಿಗೆ ಇನ್ನುಳಿದ ಜೀವನದ ಕ್ಷಣಗಳನ್ನು ಕಳೆಯಲು ಇಚ್ಛಿಸಿದ್ದರು. ತಮ್ಮ ಬಳಿಕ ತಮ್ಮ ಪುತ್ರ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸಿದ್ದರು. ಪಳನಿಯವರು ಕಟ್ಟಿದ್ದ ಕನಸಿನ ಮನೆಗೆ 15 ದಿನಗಳ ಹಿಂದಷ್ಟೇ ಅವರ ಕುಟುಂಬ ಗೃಹಪ್ರವೇಶ ಮಾಡಿತ್ತು. ಆದರೆ, ಇಂತಹದ್ದೊಂದು ದುರ್ಘಟನೆ ಸಂಭವಿಸುತ್ತದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.
ಪಳನಿಯವರು ಇದೀಗ ತಮ್ಮ ಪತ್ನಿ ವಸಂತಿ ದೇವಿ (35), 10 ವರ್ಷದ ಪುತ್ರ ಹಾಗೂ 8 ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ರಾಮನಾಥಪುರಂ ಜಿಲ್ಲೆಯ ಕಡುಕ್ಕುಲರ್ ಎಂಬ ಪ್ರದೇಶದ ಮೂಲದವರಾಗಿದ್ದ ಪಳನಿಯವರು 18 ವರ್ಷದ ಯುವಕನಾಗಿದ್ದಾಗಲೇ ಸೇನೆಗೆ ಸೇರ್ಪಡೆಗೊಂಡಿದ್ದರು. ಬಡಕುಟುಂಬದಲ್ಲಿ ಬೆಳೆದಿದ್ದ ಪಳನಿಯವರು ಕುಟುಂಬವನ್ನು ಉನ್ನತ ಮಟ್ಟಗೇರಿಸುವ ನಿಟ್ಟಿನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದ್ದರು. ರಜಾದಿನಗಳಲ್ಲಿ ಮನೆಗೆ ಬರುತ್ತಿದ್ದ ಪಳನಿ ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಳ ಕಳೆಯುತ್ತಿದ್ದರು. ಚಿಕ್ಕಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅವರೇ ಸ್ವತಃ ಅಡುಗೆಯನ್ನೂ ಮಾಡುತ್ತಿದ್ದರು ಎಂದು ಸಂಬಂಧಿಕರು ಸಂತಸದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಸೋದರನಿಗೆ ಶಿಕ್ಷಣ ಕೊಡಿಸಲು ಹಾಗೂ ಸಹೋದರಿಗೆ ವಿವಾಹ ಮಾಡಲು ಪಳನಿಯವರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಪಳನಿಯವರ ಸಹೋದರ ಕೂಡ ಸೇನೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ರಾಜಸ್ತಾನದಲ್ಲಿ ಪಳನಿಯವರ ಸಹೋದರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದ್ವಿತೀಯ ಪಿಯುಸಿ ಉತ್ತೀರ್ಣರಾಗುತ್ತಿದ್ದಂತೆಯೇ ಪಳನಿಯವರು ಸೇನೆ ಸೇರ್ಪಡೆಗೊಂಡಿದ್ದರು. ಬಳಿಕ ಸೇನೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಸಮಯದಲ್ಲಿಯೇ ಬಿಎ (ಇತಿಹಾಸ) ಪದವಿ ಮಾಡಿಕೊಂಡಿದ್ದರು. ಬಳಿಕ ಪತ್ನಿ ಕೂಡ ಬಿಎಡ್ ಮಾಡಿಕೊಳ್ಳಲು ಪ್ರೋತ್ಸಾಹ ನೀಡಿದ್ದರು. ಜೂನ್.3ರಂದಷ್ಟೇ ಪಳನಿಯವರ ಕನಸಿನ ಮನೆಗೆ ಗೃಹಪ್ರವೇಶ ಮಾಡಿದ್ದರು. ಜನವರಿ ಬಳಿಕ ಪಳನಿಯವರೂ ಕೂಡ ಕುಟುಂಬಸ್ಥರೊಂದಿಗಿರಲು ಬರಲಿದ್ದರು. ಅಷ್ಟರಲ್ಲಾಗಲೇ ಚೀನಾದ ದಾಳಿಗೆ ಪಳನಿಯವರು ಬಲಿಯಾಗಿದ್ದು, ಈ ಎಲ್ಲಾ ಕನಸುಗಳಿಗೆ ತಣ್ಣೀರು ಎರಚಿದಂತಾಗಿದೆ.
Follow us on Social media