ಮುಂಬೈ: ಟೀಂ ಇಂಡಿಯಾ ಬೌಲರ್ ಗಳ ಅರ್ಭಟದ ಮುಂದೆ ಮಂಕಾದ ನ್ಯೂಜಿಲೆಂಡ್ ತಂಡ ಕೇವಲ 62 ರನ್ ಗಳಿಗೆ ಆಲೌಟ್ ಆಗಿದ್ದು, ಆ ಮೂಲಕ 263 ರನ್ ಗಳ ಹಿನ್ನಡೆ ಅನುಭವಿಸಿದೆ.
ಭಾರತ ನೀಡಿದ 325ರನ್ ಗಳ ಮೊದಲ ಇನ್ನಿಂಗ್ಸ್ ಗುರಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಿಂದಲೂ ಭಾರತೀಯ ಬೌಲರ್ ಗಳ ಎದುರು ತಿಣುಕಾಡಿತು. ಆರಂಭಿಕರಾದ ಟಾಮ್ ಲಾಥಮ್ 10 ರನ್ ಗಳಿಸಿ ಔಟಾದರೆ, ವಿಲ್ ಯಂಗ್ ಕೇವಲ 4 ರನ್ ಗಳಿಸಿ ಔಟ್ ಆದರು.
ಬಳಿಕ ನಡೆದದ್ದು ಅಕ್ಷರಶಃ ನ್ಯೂಜಿಲೆಂಡ್ ಆಟಗಾರರ ಪೆವಿಲಿಯನ್ ಪರೇಡ್.. ಆಗ್ರ ಆರು ಆಟಗಾರರು ಒಂದಂಕಿ ಮೊತ್ತವನ್ನೂ ಮುಟ್ಟಲು ತಿಣುಕಾಡಿ ಔಟಾದರು. ಕೆಳ ಕ್ರಮಾಂಕದ ಕೈಲ್ ಜೇಮೀಸನ್ 17ರನ್ ಗಳಿಸಿದ್ದೇ ಇಡೀ ತಂಡದಲ್ಲಿ ಬ್ಯಾಟರ್ ಓರ್ವ ಗಳಿಸಿದ ವೈಯುಕ್ತಿಕ ಗರಿಷ್ಠ ರನ್ ಗಳಿಕೆಯಾಗಿದೆ.
ಒಟ್ಟಾರೆ ಭಾರತದ ವಿರುದ್ಧ ಕೇವಲ 62 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕಿವೀಸ್ ಪಡೆ 263 ರನ್ ಗಳ ಹಿನ್ನಡೆ ಅನುಭವಿಸಿದೆ.
ಇನ್ನು ಭಾರತದ ಪರ ಆರ್ ಅಶ್ವಿನ್ 4 ವಿಕೆಟ್ ಪಡೆದರೆ, ಮಹಮದ್ ಸಿರಾಜ್ 3 ಮತ್ತು ಅಕ್ಸರ್ ಪಟೇಲ್ 2 ವಿಕೆಟ್ ಪಡೆದರು.
Follow us on Social media