ಕೋಲಾರ: ಪತಿಯ ಕುಟುಂಬಸ್ಥರಿಂದ ಮಾನಸಿಕ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕು ಕಾಡದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ರಶ್ಮೀ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ನೋಟ್ನಲ್ಲಿ ತನ್ನ ಪತಿ ಹಾಗೂ ತನ್ನ ತಂದೆ ತಾಯಿಗೂ ಸಾರಿ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೇ ನಿಮ್ಮ ಅಮ್ಮ (ಪತಿಯ ತಾಯಿ), ದೊಡ್ಡಮ್ಮನ ಕಾಟ ತಡೆಯೋಕ್ಕೆ ಆಗುತ್ತಿಲ್ಲ. ಇವರು ಒಳ್ಳೆಯವರಲ್ಲ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.
ದಿನೇಶ್ ಹಾಗೂ ರಶ್ಮಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 1 ವರ್ಷದ ಹಿಂದೆ ಅಷ್ಟೇ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಒಂದೇ ವರ್ಷದಲ್ಲಿ ರಶ್ಮಿ ದುರಂತ ಸಾವು ಕಂಡಿದ್ದಾಳೆ. ಪತಿ ಮನೆಯಲ್ಲೇ ಡೆತ್‌ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಶ್ಮಿ ಡೆತ್‌ನೋಟ್ ಆಧರಿಸಿ ದೂರು ದಾಖಲಿಸಿಕೊಂಡಿರುವ ಮಾಲೂರು ಪೊಲೀಸರು, ಪತಿ ಸೇರಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
Follow us on Social media