ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿನ ಎರಡು ಮನೆಗಳಿಗೆ ನುಗ್ಗಿದ ಕಳ್ಳ ಲಕ್ಷಾಂತರ ರೂ. ಬೆಲೆಬಾಳುವ ನಗ ನಗದನ್ನು ಕದ್ದೊಯ್ದ ಘಟನೆ ಸಂಭವಿಸಿದೆ.
ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಅವರ ಮನೆಯಲ್ಲಿ ಪತ್ನಿ ಮತ್ತು ನಾದಿನಿ ಮಲಗಿದ್ದಾಗಲೇ ಮನೆಯೊಳಗೆ ನುಗ್ಗಿದ ಕಳ್ಳ ಒಟ್ಟು 12 ಗ್ರಾಂ ತೂಕವಿರುವ 3 ಉಂಗುರ, ಹಾಗೂ 6 ಗ್ರಾಂ ತೂಕವಿರುವ 4 ಉಂಗುರ ಮತ್ತು 3 ಸಾವಿರ ನಗದು ಹಣವನ್ನು ದೋಚಿದ್ದಾರೆ.
ಇದೇ ಗ್ರಾಮದ ಕೋಡಿ ಮನೆ ನಿವಾಸಿ ಅನ್ವರ್ ಅವರ ಮನೆಗೂ ಮನೆ ಮಂದಿ ಮಲಗಿದ್ದಾಗಲೇ ನುಗ್ಗಿದ ಕಳ್ಳ ಮನೆಯೊಳಗಿನ ಕಪಾಟನ್ನು ಜಾಲಾಡಿ, ಕಪಾಟಿನಲ್ಲಿದ್ದ ನಗದು ಹಣವನ್ನು ಜೀಬಿಗೆ ತುಂಬಿಸುವ ಭರದಲ್ಲಿ ಅಲ್ಲೇ ಕೆಳಕ್ಕೆ ಬೀಳಿಸಿದ್ದನೆನ್ನಾಲಾಗಿದೆ. ಆ ಸಂದರ್ಭ ಮನೆಯ ಯಜಮಾನಿ ಎದ್ದಾಗ ಕಳ್ಳ ಓಡಿ ತಪ್ಪಿಸಿಕೊಂಡಿದ್ದ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು.
Follow us on Social media