ಉಡುಪಿ: ಬೈಕ್ ಪಲ್ಟಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಪೆರಂಪಳ್ಳಿ ಕ್ರಾಸ್ ಬಳಿ ಜಿತಿನ್ ಮೋಹನ್ ಎಂಬಾತ ಬೈಕ್‌ನಲ್ಲಿ ಮೊಬಿನ್ ಎಂಬಾತನನ್ನು ಸಹಸವಾರನನ್ನಾಗಿ ಕುಳ್ಳರಿಸಿಕೊಂಡು ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ ಹೋಗುತ್ತಿದ್ದು, ಪೆರಂಪಳ್ಳಿ ಡೈವರ್ಶನ್ ಬಳಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸವಾರರಿಬ್ಬರೂ ಬೈಕ್ ಸಹಿತ ರಸ್ತೆಗೆ ಬಿದ್ದಿದ್ದಾರೆ.
ಸಹ ಸವಾರ ಮೊಬಿನ್ ಅವರ ತಲೆಗೆ ಹಾಗೂ ಸವಾರ ಜಿತಿನ್ ಮೋಹನ್ ಅವರ ಮುಖಕ್ಕೆ ಮತ್ತು ತಲೆಗೆ ಗಾಯವಾಗಿದೆ. ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media