ಪುತ್ತೂರು: ಕಾನೂನಿಗೆ ಧಕ್ಕೆ ತರುವಂತೆ ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿ, ಅದರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ಎ.10ರ ಗುರುವಾರ ನಡೆದಿದೆ.
ಪುತ್ತೂರು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಹಾಗೂ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32) ಬಂಧಿತ ಆರೋಪಿಗಳು.
ಎ.9ರ ಬುಧವಾರ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಸಂಜೆ ವೇಳೆ ಇಬ್ಬರಿಗೂ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ.
Follow us on Social media