Breaking News

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ.

ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. 93.90 ಶೇಕಾಡ ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು ಶೇ.48.45 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡದ ಎಕ್ಸ್​ಪರ್ಟ್​ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಗೆ ಮೊದಲ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು‌ ವಿದ್ಯಾರ್ಥಿನಿಯಾಗಿದ್ದಾರೆ. 600 ಕ್ಕೆ ‌ 599 ಅಂಕಗಳನ್ನು ಪಡೆದಿದ್ದಾರೆ.ಕಲಾ ವಿಭಾಗದಲ್ಲಿ ಸಂಜನಾ ಬಾಯಿ ಪ್ರಥಮ ಸ್ಥಾನ ಪಡೆದಿದ್ದಾರೆ.ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, 600 ಕ್ಕೆ ‌597 ಅಂಕ ಪಡೆದಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 53.29ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07ರಷ್ಟು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ.

ಉಡುಪಿ ಜಿಲ್ಲೆ ಶೇಕಡಾ 93.90, ದಕ್ಷಿಣ ಕನ್ನಡ ಜಿಲ್ಲೆ 93.57, ಬೆಂಗಳೂರು ದಕ್ಷಿಣ 85.36, ಕೊಡಗು ಜಿಲ್ಲೆ 83.84ರಷ್ಟು ಫಲಿತಾಂಶ, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ ಜಿಲ್ಲೆ 82.93ರಷ್ಟು ಫಲಿತಾಂಶದೊಂದಿಗೆ ಐದನೇ ಸ್ಥಾನದಲ್ಲಿದೆ.

ಉಡುಪಿ ಜಿಲ್ಲೆ ಶೇಕಡಾ 93.90, ದಕ್ಷಿಣ ಕನ್ನಡ ಜಿಲ್ಲೆ 93.57ರಷ್ಟು ಫಲಿತಾಂಶ, ಬೆಂಗಳೂರು ದಕ್ಷಿಣ 85.36, ಕೊಡಗು ಜಿಲ್ಲೆ 83.84ರಷ್ಟು ಫಲಿತಾಂಶ, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ ಜಿಲ್ಲೆ 82.93ರಷ್ಟು ಫಲಿತಾಂಶ, ಶಿವಮೊಗ್ಗ ಜಿಲ್ಲೆ 79.91, ಬೆಂಗಳೂರು ಗ್ರಾಮಾಂತರ ಜಿಲ್ಲೆ 79.70, ಚಿಕ್ಕಮಗಳೂರು ಜಿಲ್ಲೆ 79.56, ಹಾಸನ ಜಿಲ್ಲೆ 77.56ರಷ್ಟು ಫಲಿತಾಂಶ, ಚಿಕ್ಕಬಳ್ಳಾಪುರ ಜಿಲ್ಲೆ 75.80, ಮೈಸೂರು ಜಿಲ್ಲೆ 74.30ರಷ್ಟು ಫಲಿತಾಂಶ, ಚಾಮರಾಜನಗರ ಜಿಲ್ಲೆ 73.97, ಮಂಡ್ಯ ಜಿಲ್ಲೆ 73.27ರಷ್ಟು ಫಲಿತಾಂಶ, ಬಾಗಲಕೋಟೆ ಜಿಲ್ಲೆ 72.83, ಕೋಲಾರ ಜಿಲ್ಲೆ 72.45ರಷ್ಟು ಫಲಿತಾಂಶ, ಧಾರವಾಡ ಜಿಲ್ಲೆ 72.32, ತುಮಕೂರು ಜಿಲ್ಲೆ 72.02ರಷ್ಟು ಫಲಿತಾಂಶ, ರಾಮನಗರ ಜಿಲ್ಲೆ 69.71, ದಾವಣಗೆರೆ ಜಿಲ್ಲೆ 69.45ರಷ್ಟು ಫಲಿತಾಂಶ, ಹಾವೇರಿ ಜಿಲ್ಲೆ 76.56, ಬೀದರ್ ಜಿಲ್ಲೆ 67.31ರಷ್ಟು ಫಲಿತಾಂಶ ಬಂದಿದೆ.

ಕೊಪ್ಪಳ ಜಿಲ್ಲೆ 67.20, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 66.76ರಷ್ಟು ಫಲಿತಾಂಶ, ಗದಗ ಜಿಲ್ಲೆ 66.64, ಬೆಳಗಾವಿ ಜಿಲ್ಲೆ 65.37ರಷ್ಟು ಫಲಿತಾಂಶ, ಬಳ್ಳಾರಿ ಜಿಲ್ಲೆ 64.41, ಚಿತ್ರದುರ್ಗ ಜಿಲ್ಲೆ 59.87ರಷ್ಟು ಫಲಿತಾಂಶ, ವಿಜಯಪುರ ಜಿಲ್ಲೆ 58.81, ರಾಯಚೂರು ಜಿಲ್ಲೆ 58.75ರಷ್ಟು ಫಲಿತಾಂಶ ಕಲಬುರಗಿ ಜಿಲ್ಲೆ 55.70, ಯಾದಗಿರಿ ಜಿಲ್ಲೆ 48.45ರಷ್ಟು ಫಲಿತಾಂಶ ಬಂದಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದು, ಆ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ. 3,45,694 ಬಾಲಕಿಯರು ಪರೀಕ್ಷೆ ಬರೆದಿದ್ದರು ಅದರಲ್ಲಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶವನ್ನು karresults.nic.inನಲ್ಲಿ ಮಧ್ಯಾಹ್ನ 1.30ರ ಬಳಿಕ ವೀಕ್ಷಿಸಬಹುದು. ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಮತ್ತು karresults.nic.in ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕುವ ಮೂಲಕ ವೀಕ್ಷಿಸಬಹುದು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×