ಬೆಳ್ತಂಗಡಿ: ಉಜಿರೆಯ ಹಲಕ್ಕೆ ನಿವಾಸಿ, ಅನಿತಾ ಡಿಸೋಜ ಮತ್ತು ರಿಚರ್ಡ್ ಡಿಕುನ್ಹಾ ದಂಪತಿಯ ಪುತ್ರಿ,
ಕ್ರೀಡಾ ಪ್ರತಿಭೆ ವಿಲೋನಾ ಡಿಕುನ್ಹಾ ಮೇ 2 ಮತ್ತು 3 ರಂದು ಇಂಡೋನೇಷ್ಯಾದ ಬಟಮ್ ನಲ್ಲಿ ನಡೆಯುವ ಇಂಟರ್ನಾಷ್ಯನಲ್ ತ್ರೋಬಾಲ್ ಪಂದ್ಯಾಟದಲ್ಲಿ ಎಫ್‌ಎಸ್‌ಎ ಇಂಡಿಯಾ ಟೀಮ್ ಪ್ರತಿನಿಧಿಸಲಿದ್ದಾರೆ.
ವಿಲೋನಾ ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ಬಿಕಾಂ ನಲ್ಲಿ ಎಸಿಸಿಎ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು,
ಇವರು ಉಜಿರೆಯ ಅನುಗ್ರಹ ಮತ್ತು ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ. ಇವರ ಈ ಸಾಧನೆಗೆ ಶಿಕ್ಷಕ ವರ್ಗ ಮತ್ತು ಕುಟುಂಬದ ವರ್ಗ, ಬಂಧುಗಳು ಅಭಿನಂದಿಸಿದ್ದಾರೆ.
Follow us on Social media