ವಿಟ್ಲ: ಯುವತಿಯರ ಮೊಬೈಲ್ ನಂಬರ್ ಪಡೆದು ಅಶ್ಲೀಲವಾಗಿ ಮೆಸೇಜ್ ಕಳುಹಿಸಿ , ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಯುವಕನೋರ್ವನಿಗೆ ಯುವತಿಯ ಪರಿಚಯವಾಗಿದೆ. ಆಕೆಯ ಜೊತೆ ಈತ ನಂಬರ್ ಕೇಳಿದ್ದಾನೆ, ಆದ್ರೆ ಆಕೆ ಪರಿಚಯದ ಸ್ನೇಹಿತನೋರ್ವನ ನಂಬರ್ ನೀಡಿದ್ದಾಳೆ. ಆ ನಂಬರ್ ಯುವತಿಯದ್ದೇ ಎಂದು ತಿಳಿದು ರಾತ್ರಿಯಿಡೀ ಆಶ್ಲೀಲ ಸಂದೇಶ ಕಳುಹಿಸಿದ್ದಾನೆ. ಸಂದೇಶದಲ್ಲಿ ಭೇಟಿಯಾಗೋಣ ಎಂದು ಹೇಳಿದ್ದು, ಯುವತಿಯೇ ಅಂತ ತಿಳಿದು ಭೇಟಿಯಾಗಲು ಹೋಗಿದ್ದಾನೆ. ಆದ್ರೆ ಅಲ್ಲಿ ಅವನಿಗೆ ಸರ್ಪ್ರೈಸ್ ಕಾದಿತ್ತು. ಹುಡುಗಿ ಎಂದು ಭೇಟಿಯಾಗಲು ಬಂದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸದ್ಯ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕನ್ಯಾನ ನಿವಾಸಿ ಸವಾದ್ ಎಂಬುವವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Follow us on Social media