ಮಣಿಪಾಲ: ಬಾರ್‌ನಲ್ಲಿ ಊಟ ಮಾಡುತ್ತಿದ್ದವರಿಗೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ಹೆರ್ಗದ ದೀಕ್ಷಿತ್ ಅವರು ಈಶ್ವರ ನಗರದಲ್ಲಿರುವ ಬಾರ್‌ನಲ್ಲಿ ಸ್ನೇಹಿತರಾದ ಸತೀಶ್ ಹಾಗೂ ಹಿತೇಶ್ ಜತೆಗೆ ಊಟ ಮಾಡುತ್ತಿದ್ದರು. ಈ ವೇಳೆ ಮಹಾನ್, ಸುಮಿತ್, ವರುಣ್ ಬಂದು ದೀಕ್ಷಿತ್‌ನ ಕೆನ್ನೆಗೆ ಹೊಡೆದು ಬಳಿಕ ಟೇಬಲ್ ಮೇಲಿದ್ದ ಸೋಡಾ ಬಾಟ್ಲಿಯನ್ನು ತೆಗೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರ ತಲೆಗೆ ತಾಗಿ ಗಾಯಗೊಂಡಿದೆ. ಆಗ ಅಲ್ಲಿಯೇ ಇದ್ದ ಸುಮಿತ್ ಹಾಗೂ ವರುಣ್ ಕೂಡ ದೀಕ್ಷಿತ್‌ಗೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media