Breaking News

ಪಾಟೀದಾರ್ ನಾಯಕತ್ವದಲ್ಲಿ ಆರ್‍.ಸಿ.ಬಿ ವಾತಾವರಣ ಫುಲ್ ಚೆಂಜ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಾಟೀದಾರ್, ಎರಡೇ ಎರಡು ಪಂದ್ಯಗಳಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಬಲಿಷ್ಟ ಕೆಕೆಆರ್ ಮತ್ತು ಸಿಎಸ್​​ಕೆ ಮಣಿಸಿರುವ ಪಾಟೀದಾರ್ ಅದ್ಭುತವಾಗಿ ತಂಡ ಮುನ್ನಡೆಸಿದ್ದಾರೆ. ಆರ್​ಸಿಬಿ ಅಭಿಮಾನಿಗಳಂತೂ ಪಾಟೀದಾರ್ ಲಕ್ಕಿ ಕ್ಯಾಪ್ಟನ್ ಎನ್ನುತ್ತಿದ್ದಾರೆ.

ರಾಹುಲ್ ದ್ರಾವಿಡ್​​ನಿಂದ ಹಿಡಿದು ಫಾಫ್ ಡುಪ್ಲೆಸಿವರೆಗೂ ಅದೆಷ್ಟೋ ನಾಯಕರು ಆರ್​ಸಿಬಿಯನ್ನು ಮುನ್ನಡೆಸಿದ್ರು. ಆದರೆ ಯಾವ ನಾಯಕನೂ, ಆರ್​ಸಿಬಿಗೆ ಒಂದೇ ಒಂದೇ ಟೈಟಲ್ ಗೆಲ್ಲಿಸಿ ಕೊಡಲಿಲ್ಲ. ಕೆವಿನ್ ಪೀಟರ್​ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಶೇನ್ ವಾಟ್ಸನ್.. ಹೀಗೆ ಘಟಾನುಘಟಿ ಆಟಗಾರರು, ಆರ್​ಸಿಬಿ ತಂಡದ ಸಾರಥ್ಯವಹಿಸಿಕೊಂಡ್ರು.

ಕಪ್ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಆದ್ರೀಗ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಾಟೀದಾರ್, ಆರ್​ಸಿಬಿಗೆ ಕಪ್ ಗೆಲ್ಲಿಸುವ ಭರವಸೆ ಮೂಡಿಸಿದ್ದಾರೆ. ಅದು ಅವರ ನಾಯಕತ್ವದಿಂದ. ರಜತ್ ಪಾಟೀದಾರ್ ಆರ್​ಸಿಬಿಯ ಲಕ್ಕಿ ಕ್ಯಾಪ್ಟನ್ ಅಂತ ಕ್ರಿಕೆಟ್ ಪಂಡಿತರು ಬಿಂಬಿಸುತ್ತಿದ್ದಾರೆ. 2 ಪಂದ್ಯಗಳಲ್ಲೇ ಪಾಟೀದಾರ್ ನಾಯಕತ್ವಕ್ಕೆ, ದಿಗ್ಗಜರೇ ಫಿದಾ ಆಗಿದ್ದಾರೆ.

17 ವರ್ಷಗಳಿಂದ ಆರ್​ಸಿಬಿ, ತನ್ನದೇ ಆದ ದೊಡ್ಡ ಫ್ಯಾನ್​ ಕ್ಲಬ್​ ಹೊಂದಿದೆ. ಹಾಗಾಗಿ ಆರ್​ಸಿಬಿಯಂತಹ ದೊಡ್ಡ ಫ್ರಾಂಚೈಸಿಯನ್ನ ಮುನ್ನಡೆಸೋದು ಅಷ್ಟು ಸುಲಭವಲ್ಲ. ಇದೇ ಮೊದಲ ಬಾರಿಗೆ ಆರ್​ಸಿಬಿ ತಂಡದ ಸಾರಥ್ಯವಹಿಸಿಕೊಂಡಿರುವ ಪಾಟೀದಾರ್, ಅನುಭವಿ ನಾಯಕನಂತೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒತ್ತಡದಲ್ಲೂ ಕೂಲ್ ಅಂಡ್​​​​​​​ ಕಾಮ್ ಆಗಿ ಸಂದರ್ಭಕ್ಕೆ ತಕ್ಕಂತೆ ರಿಯಾಕ್ಟ್​ ಮಾಡ್ತಿದ್ದಾರೆ.
ಬ್ರಿಲಿಯಂಟ್ ಟ್ಯಾಕ್ಟಿಕಲ್ ಕ್ಯಾಪ್ಟನ್ ಪಾಟೀದಾರ್.

ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಪಾಟೀದಾರ್, ಮಧ್ಯಪ್ರದೇಶ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಇದಕ್ಕೆ ಕಾರಣ ಆನ್​​ಫೀಲ್ಡ್​ನಲ್ಲಿ ಪಾಟೀದಾರ್​​ರ ಬ್ರಿಲಿಯಂಟ್ ಟ್ಯಾಕ್ಟಿಕ್ಸ್. ಆರ್​ಸಿಬಿ ನಾಯಕನಾಗಿಯೂ ಪಾಟೀದಾರ್, ಇದೇ ಫಾರ್ಮುಲಾವನ್ನ ಮುಂದುವರೆಸುತ್ತಿದ್ದಾರೆ. ಪಂದ್ಯದ ವೇಳೆ ಸಾಲಿಡ್ ಗೇಮ್​ಪ್ಲಾನ್ ಮಾಡೋ ಆರ್​ಸಿಬಿ ಸಾರಥಿ, ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

ರಜತ್ ಪಾಟೀದಾರ್ ಆರ್​ಸಿಬಿ ತಂಡದ ಸಾರಥ್ಯವಹಿಸಿಕೊಂಡ ಮೇಲೆ ತಂಡದ ಚರಿಷ್ಮಾನೇ ಬದಲಾಯ್ತು. ಸೀನಿಯರ್ಸ್, ಜ್ಯೂನಿಯರ್ಸ್ ಮತ್ತು ಹೊಸಬರು ಅನ್ನೋ ಕಾನ್ಸೆಪ್ಟ್ ಮಾಯಾವಾಯ್ತು. ಡ್ರೆಸಿಂಗ್​​ನಲ್ಲಿ ರೂಮ್​ನಲ್ಲಿ ಎಲ್ಲರೂ ಒಂದೇ ಅನ್ನೋ ಮಂತ್ರ ಶುರುವಾಯ್ತು. ಇದ್ರಿಂದ ಉತ್ತಮ ವಾತಾವರಣ ಸೃಷ್ಠಿಯಾಗಿದ್ದಲ್ಲದೇ ಆಟಗಾರರ ಉತ್ಸಾಹ ಕೂಡ ಹೆಚ್ಚಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×