ಸಾಮಾಜಿಕ ಜಾಲತಾಣಗಳಲ್ಲಿ ಈಗ ಕಾರ್ಟೂನ್ ಅಥವಾ ಆನಿಮೇಟೆಟ್ ಸಿನಿಮಾ ಪಾತ್ರಗಳಂತೆ ಇರುವ ಚಿತ್ರಗಳು ಟ್ರೆಂಡ್ ಸೃಷ್ಟಿಸಿದೆ. ನಟ, ನಟಿಯರು, ರಾಜಕಾರಣಿಗಳು ಈ ಟ್ರೆಂಡ್‌ಗೆ ಸೇರ್ಪಡೆಯಾಗಿದ್ದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಟೂನ್‌ಗಳಿಗೆ ಭಾರೀ ಜನಪ್ರಿಯತೆ ಬಂದಿದೆ.
ಈ ಚಿತ್ರದ ಮೂಲ ಇರುವುದು ಜಪಾನ್‌ನಲ್ಲಿ. ಜಪಾನ್‌ನ ಅತ್ಯಂತ ಜನಪ್ರಿಯ ಆನಿಮೇಷನ್ ಫಿಲ್ಮ್ ಸ್ಟುಡಿಯೋದ ಹೆಸರು ಘಿಬ್ಲಿ. 1985ರಲ್ಲಿ ಮಿಯಾಝಾಕಿ ಹಯಾವೋ, ಸುಜುಕಿ ಟೊಶಿವೊ ಹಾಗೂ ತಕಾಹತ ಇಸಾವೊ ಈ ಸ್ಟುಡಿಯೋವನ್ನು ಸ್ಥಾಪಿಸಿದ್ದರು.
ಭಾವನಾತ್ಮಕವಾಗಿ ಆಕರ್ಷಕವಾಗಿರುವ ಕಥೆ ಹೇಳುವಿಕೆಯೊಂದಿಗೆ ಕೈಯಿಂದ ಚಿತ್ರಿಸಿದ ಅನಿಮೇಷನ್‌ಗೆ ಘಿಬ್ಲಿ ಹೆಸರುವಾಸಿಯಾಗಿದೆ. 90ರ ದಶಕದಲ್ಲಿ ಮೈ ನೇಬರ್ ಟೊಟೊರೊ, ಕಿಕಿಸ್ ಡೆಲಿವರಿ ಸರ್ವೀಸ್, ಸೇರಿದಂತೆ ಹಲವು ಆನಿಮೇಟೆಡ್ ಸಿನಿಮಾ/ ಸೀರಿಯಲ್‌ಗಳು ಪ್ರಸಿದ್ಧಿ ಪಡೆದಿದ್ದವು.
ಓಪನ್ ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ ಘಿಬ್ಲಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಚಾಟ್‌ಜಿಪಿಟಿ 4ನೇ ಆವೃತ್ತಿಯಲ್ಲಿ ಘಿಬ್ಲಿ ಚಿತ್ರಗಳನ್ನು ಸೃಷ್ಟಿಸುವ ಆಯ್ಕೆ ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ತಮ್ಮ ಪ್ರೊಫೈಲಿಗೆ ಘಿಬ್ಲಿ ಚಿತ್ರವನ್ನೇ ಅಪ್ಲೋಡ್ ಮಾಡಿದರು. ಹೇಳಿ ಕೇಳಿ ಈಗ ದೊಡ್ಡವರು ಖ್ಯಾತನಾಮರು ಏನೇ ಹೇಳಿದರೂ ಅದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸುತ್ತದೆ. ಆಲ್ಟ್‌ಮನ್ ಹೇಳಿದ್ದೇ ತಡ ನೆಟ್ಟಿಗರು ಈಗ ಘಿಬ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮದೇ ಕಾರ್ಟೂನ್ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ.
Follow us on Social media