ಕುಂದಾಪುರ: ಪರೀಕ್ಷೆ ಸಮಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲು ಕಷ್ಟಪಟ್ಟು ಓದುತ್ತಿದ್ದರೆ ಇಲ್ಲೊಬ್ಬ ವಿದ್ಯಾರ್ಥಿ ದೈವಕ್ಕೆ ನನಗೆ ಇಷ್ಟೇ ಅಂಕಗಳು ಬೇಕು ಎಂದು ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಸದ್ಯ ಕಾಣಿಕೆ ಡಬ್ಬಿಗೆ ವಿದ್ಯಾರ್ಥಿ ಹಾಕಿರುವ ಬೇಡಿಕೆ ಪಟ್ಟಿ ವೈರಲ್ ಆಗಿದೆ.
ಹಕ್ಲಾಡಿ ಸಮೀಪದ ಹೊಳ್ಳಗೆ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಹಾಗೂ ಕೆಂಡಸೇವೆ ಮಾರ್ಚ್ 14ರಂದು ನಡೆದಿತ್ತು. ಇದಾದ 10 ದಿವಸದ ಬಳಿಕ, ಮಾರ್ಚ್ 24ರಂದು ದೈವಸ್ಥಾನದ ಆಡಳಿತದವರು ಊರವರ ಉಪಸ್ಥಿತಿಯಲ್ಲಿ ದೇವರ ಕಾಣಿಕೆ ಡಬ್ಬಿ ತೆರೆದಿದ್ದಾರೆ. ಈ ವೇಳೆ ಭಕ್ತರು ಹಾಕಿರುವ ಕಾಣಿಕೆ ಹಣದ ಜೊತೆಗೆ ವಿದ್ಯಾರ್ಥಿ ಬೇಡಿಕೆ ಇರುವ ಪಟ್ಟಿ ದೊರಕಿದೆ.
ಈ ಚೀಟಿಯಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ ದಲ್ಲಿ 36 ರಿಂದ 39, ಇಂಗ್ಲೀಷ್- 37 ರಿಂದ 39 ಕನ್ನಡದಲ್ಲಿ 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿ ಮಾಡಲಾಗಿದೆ.
Follow us on Social media