Breaking News

ರಾಜ್ಯದ ಜನತೆಗೆ ಮತ್ತೊಂದು ಶಾಕ್‌ – ನಂದಿನಿ ಹಾಲಿನ ದರ 4 ರೂ. ಹೆಚ್ಚಳ

ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ದೊಡ್ಡ ಶಾಕ್‌ ಕೊಟ್ಟಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ.

ಪ್ರತಿ ಲೀಟರ್‌ ನಂದಿನಿ ಹಾಲಿನ ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ನಾಳೆಯಿಂದಲೇ (ಮಾ.28) ಪರಿಷ್ಕೃತ ದರ ಜಾರಿಯಾಗಲಿದೆ.

6-8 ರೂ. ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳು ಪ್ರಸ್ತಾಪಿಸಿದ್ದವು. ಆದರೆ ಸೋಮವಾರ ನಡೆದ ಸಭೆಯಲ್ಲಿ ಸಿಎಂ ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು. ಆದ್ರೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ 4 ರೂ. ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×