ಬೆಳ್ತಂಗಡಿ: ಬಾಲಕಿಗೆ ದೊಡ್ಡಮ್ಮನ ಮಗನೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ ತಾಲೂಕು ಸುಲ್ಕೇರಿಮೊಗ್ರು ಗ್ರಾಮದಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ಸುಲ್ಕೇರಿ ಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಗೆ ತನ್ನ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳವಾದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ದೊಡ್ಡಮ್ಮನ ಮಗನು ದೇವರ ಗುಡ್ಡೆಯ ಮನೆಯಲ್ಲಿ ಹಾಗೂ ಮೂರು ಸಲ ಕುತ್ಲೂರಿನ ಅಜ್ಜನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು. ಬಳಿಕ ಬಾಲಕಿಗೆ ತಾಯಿಗೆ ತಿಳಿಸಲಾಗಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಮಾ.26ರಂದು ದೂರು ದಾಖಲಿಸಲಾಗಿದೆ.
Follow us on Social media