ಉಡುಪಿ: ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಪ್ ಪ್ರಚೋದನಕಾರಿ ಆಡಿಯೊ ಕ್ಲಿಪ್ ಹಂಚಿಕೊಂಡಿರುವುದಕ್ಕೆ ಮಲ್ಪೆ ಠಾಣೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯು ವಾಟ್ಸಪ್ ನಲ್ಲಿ ತುಳು ಭಾಷೆಯಲ್ಲಿ ಆಡಿಯೊ ಕ್ಲಿಪ್ ಹರಿಯಬಿಟ್ಟಿದ್ದು ಅದರಲ್ಲಿ ‘ಸೋಮವಾರ ಹೋಯ್ತು ಮಂಗಳವಾರ ಬಂತು. ಆದರೂ ಇದುವರೆಗೂ ಮೀನುಗಾರ ಹೆಂಗಸರ ಬಿಡುಗಡೆ ಅಗಲಿಲ್ಲ. ಅದಕ್ಕೆ ನಮ್ಮ ಮೀನುಗಾರ ಸಂಘದವರು ಒಟ್ಟಾಗಿ ಗಂಗೊಳ್ಳಿಯಲ್ಲಿ ಮಾಡಿದಂತೆ ಎಲ್ಲರೂ ಒಟ್ಟಾಗಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಎಸ್.ಪಿ. ಹಾಗೂ ಅವರ ಮೇಲೆ ಇದ್ದವರಿಗೂ ನಮ್ಮ ಶಕ್ತಿ ಎಷ್ಟಿದೆ ಎಂದು ಗೊತ್ತಾಗುತ್ತೆ’ ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಬಗ್ಗೆ ಅಪರಿಚಿತ ವ್ಯಕ್ತಿಯು ಆಡಿಯೊ ಕ್ಲಿಪ್‌ನಲ್ಲಿ ಉಲ್ಲೇಖಿಸಿದ್ದು, ಸಾರ್ವಜನಿಕರಿಂದ ಅಂತಹ ಅಪರಾಧ ಮಾಡಿಸಲು ಪ್ರೇರಣೆ ನೀಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
Follow us on Social media