ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಮ್ನಲ್ಲಿ ನಿನ್ನೆ ನಡೆದ 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ.
ಕೆಕೆಆರ್ ನೀಡಿದ 175 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಫಿಲ್ ಸಾಲ್ಟ್ ಅಬ್ಬರಿಸಿದರು. ಕೆಕೆಆರ್ ಬೌಲರ್ಗಳನ್ನು ಕಾಡಿದ ಇವರು ಕೇವಲ 31 ಬಾಲ್ನಲ್ಲಿ 56 ರನ್ ಚಚ್ಚಿದ್ರು. ಈ ಪೈಕಿ ಬರೋಬ್ಬರಿ 9 ಫೋರ್, 2 ಭರ್ಜರಿ ಸಿಕ್ಸರ್ಗಳು ಇದ್ದವು. ಫಿಲ್ ಸಾಲ್ಟ್ಗೆ ಸಾಥ್ ನೀಡಿದ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಆರಂಭದಿಂದಲೇ ಅಗ್ರೆಸ್ಸಿವ್ನಿಂದ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು. ಕೊನೆಯವರೆಗೂ ಕ್ರೀಸ್ನಲ್ಲೇ ನಿಂತು ಬ್ಯಾಟ್ ಮಾಡಿದ ಇವರು ಕೇವಲ 36 ಬಾಲ್ನಲ್ಲಿ 59 ರನ್ ಚಚ್ಚಿದ್ರು. 3 ಭರ್ಜರಿ ಸಿಕ್ಸರ್, 4 ಫೋರ್ಗಳು ಸೇರಿದ್ದವು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 163ಕ್ಕೂ ಹೆಚ್ಚಿತ್ತು.
ಇನ್ನೊಂದೆಡೆ ಕ್ಯಾಪ್ಟನ್ ರಜತ್ ಪಾಟಿದಾರ್ ಕೇವಲ 16 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 34 ರನ್ ಬಾರಿಸಿದರು. ದೇವದತ್ ಪಡಿಕ್ಕಲ್ ಕೇವಲ 10 ರನ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ 5 ಎಸೆತಗಳಲ್ಲಿ 1 ಸಿಕ್ಸರ್, 2 ಫೋರ್ ಸಮೇತ 15 ರನ್ ಚಚ್ಚಿದ್ರು. ಆರ್ಸಿಬಿ 16.2 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿ ಗೆದ್ದು ಬೀಗಿದೆ.
Follow us on Social media